Advertisement
ಮಂಗಳವಾರ ಮುಂಜಾನೆ 3.20ಕ್ಕೆ ಮುಂಬಯಿನಿಂದ ಮಂಗಳೂರಿಗೆ ಹೊರಡ ಬೇಕಾಗಿದ್ದ “ಮತ್ಸ Âಗಂಧ ಎಕ್ಸ್‌ಪ್ರೆಸ್’ (ರೈಲು ನಂ.2619) ರೈಲು ತಡವಾಗಿ ಅಂದರೆ ಬುಧವಾರ ಸಂಜೆ 4.15ಕ್ಕೆ ಹೊರಟಿದೆ. ಅದರಂತೆಯೇ ಮುಂಬಯಿ ಟರ್ಮಿನಲ್‌ನಿಂದ ಕಂಕನಾಡಿ ಜಂಕ್ಷನ್‌ಗೆ ಆಗಮಿಸುವ ಮುಂಬಯಿ ಎಕ್ಸ್‌ಪ್ರೆಸ್ ರೈಲು ಬುಧವಾರ ಬೆಳಗ್ಗೆ 10 ಗಂಟೆಗೆ ಹೊರಡಬೇಕಿತ್ತು. ಆದರೆ ರೈಲು ನಿಲ್ದಾಣದ ಸುತ್ತಮುತ್ತ ನೀರು ತುಂಬಿಕೊಂಡ ಕಾರಣ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರೈಲು ಮಧ್ಯಾಹ್ನ 3.30ಕ್ಕೆ ಹೊರಟಿದೆ. ಈ ರೈಲು ಗುರುವಾರ ಬೆಳಗ್ಗೆ 7 ಗಂಟೆಗೆ ಕಂಕನಾಡಿ ತಲುಪಲಿದೆ. ಆದರೆ ಮಂಗಳೂರಿನಿಂದ ಮುಂಬಯಿಗೆ ತೆರಳುವ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ ಎಂದು ಮಂಗಳೂರು ಸೆಂಟ್ರಲ್ ರೈಲ್ವೇ ಅಧಿ ಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಜಂಕ್ಷನ್- ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲು ಆ. 31ರಂದು 14 ಗಂಟೆಗೆ, ಎರ್ನಾಕುಳಂ ಜಂಕ್ಷನ್- ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ರೈಲು ಆ. 31 ರಂದು 20 ಗಂಟೆಗೆ, ಕೊಚ್ಚುವೇಲಿ- ಲೋಕ ಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು ಆ. 31 ರಂದು 23.45ಕ್ಕೆ, ಎರ್ನಾಕುಳಂ ಜಂಕ್ಷನ್- ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ ರೈಲು ಆ. 31ರಂದು 16 ಗಂಟೆಗೆ ಹೊರಡ ಲಿದೆ ಎಂದು ಪ್ರಕಟನೆ ತಿಳಿಸಿದೆ.