ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿರುವ ನಡುವೆಯೇ ಪುಣೆಯಲ್ಲಿ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಮೇಲೆ ಶಿವಸೇನಾ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ಶನಿವಾರ (ಜೂನ್ 25) ನಡೆದಿದೆ.
ಇದನ್ನೂ ಓದಿ:ಬಿಸಿಸಿಐ ದೆಸೆಯಿಂದ ಸೆಕಂಡ್ ಹ್ಯಾಂಡ್ ವಸ್ತುಗಳ ಅಂಗಡಿ ನಡೆಸ್ತಿದ್ದಾರೆ ಮಾಜಿ ಐಸಿಸಿ ಅಂಪೈರ್!
ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಶಿವಸೇನಾ ಮುಖಂಡರ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಪುಣೆ ಪೊಲೀಸ್ ವರಿಷ್ಠಾಧಿಕಾರಿ ಎಲ್ಲಾ ಪೊಲೀಸ್ ಠಾಣೆಗೆಳಿಗೆ ಸಂದೇಶವನ್ನು ರವಾನಿಸಿದ್ದಾರೆ. ಎಲ್ಲಾ ದ್ರೋಹಿಗಳಿಗೂ ಮತ್ತು ನಮ್ಮ ವರಿಷ್ಠ ಉದ್ಧವ್ ಠಾಕ್ರೆಗೆ ಕಿರುಕುಳ ನೀಡಿದ ಶಾಸಕರುಗಳಿಗೆ ಇದೇ ರೀತಿಯ ಶಾಸ್ತಿಯಾಗಲಿದೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ.
ಶಿವಸೇನಾ ಶಾಸಕರ ಬಂಡಾಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದಾರೆ. ಶಿವಸೇನಾ ಪಕ್ಷವನ್ನು ನಾಶ ಮಾಡುವುದು ಬಿಜೆಪಿಯ ಗುರಿಯಾಗಿದೆ ಎಂದು ದೂರಿದ್ದಾರೆ.
ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷ ಸಭೆಯನ್ನು ಕರೆದಿದ್ದು, ಪಕ್ಷದ ಮುಖಂಡ, ಸಚಿವ ಬಾಳಾಸಾಹೇಬ್ ಥೋರಟ್ ಅವರ ನಿವಾಸದಲ್ಲಿ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ.