ಮುಂಬಯಿ : ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಬಳಿ ಅನುಮಾನಾಸ್ಪದ ರೀತಿಯಲ್ಲಿ ಕಂಡುಬಂದ ಬೋಟ್ ಒಂದನ್ನು ಮುಂಬೈ ಪೊಲೀಸರ ಗಸ್ತು ತಂಡ ಮಂಗಳವಾರ ಸಂಜೆ ಗೇಟ್‌ವೇ ಆಫ್ ಇಂಡಿಯಾ ಬಳಿಯ ಅರಬ್ಬಿ ಸಮುದ್ರದಲ್ಲಿ ಕುವೈತ್‌ನಿಂದ ಬಂದ ಬೋಟ್ ಒಂದನ್ನು ವಶಕ್ಕೆ ಪಡೆದುಕೊಂಡಿದೆ. ಅದರಲ್ಲಿದ್ದ ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುವೈಟ್ ಮೂಲದ ಬೋಟ್ ಆಗಿರುವುದರಿಂದ ಅನುಮಾನಗೊಂಡ ಪೋಲೀಸರ ತಂಡ ಬೋಟ್ ತಡೆದು ವಿಚಾರಣೆ ನಡೆಸಿದೆ. ಆದರೆ ಅದರಲ್ಲಿ ಇದ್ದದ್ದು ಭಾರತೀಯರೇ ಆಗಿರುವುದರಿಂದ ಜೊತೆಗೆ ಬೋಟ್ ನಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಹಾಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಟ್ ನಲ್ಲಿದ್ದ ಮೂವರನ್ನು ಆಂಟನಿ, ನೀಡಿಸೋ ಡಿಟೋ ಮತ್ತು ವಿಜಯ್ ಆಂಟೋನಿ ಎಂದು ಗುರುತಿಸಲಾಗಿದ್ದು ಮೂವರು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವರು ಎನ್ನಲಾಗಿದೆ. ಸದ್ಯ ಅವರು ಕೊಲಾಬಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ವಶದಲ್ಲಿದ್ದಾರೆ ವಿಚಾರಣೆ ನಡೆಸುತ್ತಿದ್ದಾರೆ ಆದರೆ ಅವರ ವಿರುದ್ಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.
ಸದ್ಯ ಕುವೈತ್ ಮೂಲದ ದೋಣಿಯನ್ನು ಗೇಟ್‌ವೇ ಆಫ್ ಇಂಡಿಯಾದಲ್ಲಿ ಪೊಲೀಸರು ಸುರಕ್ಷಿತವಾಗಿ ಡಾಕ್ ಮಾಡಲಾಗಿದೆ, ಈ ಬೋಟ್ ಅನ್ನು ಯಾಕೆ ಇಲ್ಲಿಗೆ ತರಲಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಪೊಲೀಸರ ವಶದಲ್ಲಿರುವ ಮೂವರು ಕುವೈಟ್ ನ ಮೀನುಗಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಲ್ಲಿ ಅವರು ಉದ್ಯೋಗದಾತರಿಂದ ಚಿತ್ರಹಿಂಸೆ ಮತ್ತು ಶೋಷಣೆಯನ್ನು ಅನುಭವಿಸುತ್ತಿದ್ದರು ಅಲ್ಲದೆ ಸಂಬಳವನ್ನು ನೀಡದೆ ಸತಾಯಿಸುತ್ತಿದ್ದರು ಜೊತೆಗೆ ಅವರ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು ಹಾಗಾಗಿ ಅಲ್ಲಿಂದ ತಪ್ಪಿಸಿಕೊಳ್ಳಲು ಮಾಲೀಕನ ಬೋಟನ್ನೇ ಕದಿಯಬೇಕಾಯಿತು ಅದು ಬಿಟ್ಟು ಬೇರೆ ಮಾರ್ಗ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Daily Horoscope: ಕಾರ್ಯನಿರ್ವಹಣೆಯಲ್ಲಿ ಕುಗ್ಗದ ಉತ್ಸಾಹ, ವಿವಿಧ ವಿಭಾಗಗಳಿಂದ ಕೆಲಸದ ಒತ್ತಡ