ಮುಂಬೈ: ಪ್ರತಿಷ್ಠಿತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದೆದುರು ಸ್ಪೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಎನ್ ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಸಚಿನ್ ವಾಜೆ ಅವರನ್ನು ಎನ್ ಐಎ ಬಂಧಿಸಿದೆ.
ಸಚಿನ್ ವಾಜೆ ಅವರನ್ನು ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ದಳ ( ಎನ್ ಐಎ) ಅಧಿಕಾರಿಗಳು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಇದನ್ನೂ ಓದಿ:ಅಸ್ಟ್ರಾಜೆನೆಕಾ ಅಡ್ಡಪರಿಣಾಮ ಅಧ್ಯಯನ : ಭಾರತದಲ್ಲಿ ಅಡ್ಡಪರಿಣಾಮಗಳು ಕ್ಷೀಣ
ಫೆ.25ರಂದು ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಕಾರ್ಪಿಯೋ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಬೆದರಿಕೆ ಪತ್ರಗಳು ದೊರೆತಿದ್ದವು. ಈ ಮೊದಲು ಈ ಪ್ರಕರಣದ ತನಿಖೆಯನ್ನು ಸಚಿನ್ ವಾಜೆ ಅವರಿಗೆ ವಹಿಸಲಾಗಿತ್ತು. ನಂತರ ಎನ್ ಐಎ ಗೆ ಕೇಸು ಹಸ್ತಾಂತರವಾಗಿತ್ತು.
ಸ್ಫೋಟಕಗಳು ತುಂಬಿದ್ದ ಕಾರನ್ನು ಫೆ 25ರಂದು ಅಂಬಾನಿ ನಿವಾಸದ ಮುಂದೆ ತಂದಿರಿಸುವಲ್ಲಿ ಸಚಿನ್ ವಾಜೆ ಅವರ ಪಾತ್ರವಿದೆ ಎಂದು ಎನ್ ಐಎ ಮೂಲಗಳು ತಿಳಿಸಿದೆ.
ಇದನ್ನೂ ಓದಿ: ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ ಅಪಾಯಕಾರಿ ಆ್ಯಪ್ ಗಳು