Advertisement

ಪ್ರೇಯಸಿಯ ದುಬಾರಿ ಉಡುಗೊರೆ ಬೇಡಿಕೆಗೆ ಬೇಸತ್ತು ಪ್ರೇಯಸಿಯನ್ನೇ ಹತ್ಯೆಗೈದ ಪ್ರಿಯಕರ

11:23 AM Feb 06, 2022 | Team Udayavani |

ಮುಂಬಯಿ: ಒಂದು ತಿಂಗಳ ಹಿಂದೆ ಮುಂಬಯಿ ಸಾಂತಾಕ್ರೂಜ್‌ನಿಂದ ನಾಪತ್ತೆಯಾಗಿದ್ದ 29 ವರ್ಷದ ಯುವತಿಯ ಹತ್ಯೆ ಮಾಡಿರುವ ಪ್ರಕರಣದ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಈ ಪ್ರಕರಣದಲ್ಲಿ ಆಕೆಯ ಪ್ರಿಯಕರ ಮತ್ತು ಸಹಚರನನ್ನು ವಿಲೇಪಾರ್ಲೆಯಿಂದ ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿ ಪಿಂಕಿ ಕ್ಲಿಫರ್ಡ್‌  ಮಿಸ್ಕ್ವಿತ್ತಾ ಎಂದು ಗುರುತಿಸಲಾಗಿದ್ದು, ಆರೋಪಿ ಜಿಕೋ ಅನ್ಸಲಿಮ್‌ ಮಿಸ್ಕಿತ್‌ (27) ಮತ್ತು ಆತನ ಸ್ನೇಹಿತ ಕುಮಾರ್‌ ಎಂದು ಗುರುತಿಸಲಾಗಿದೆ.

ಆರೋಪಿ ಪ್ರಿಯಕರ ತಪ್ಪೊಪ್ಪಿಕೊಂಡಿದ್ದು, ದುಬಾರಿ ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಗೆಳತಿ ನಿರಂತರವಾಗಿ ಒತ್ತಾಯಿಸುತ್ತಿದ್ದಳು. ಇದರಿಂದ ಆಕೆಯನ್ನು ಹತ್ಯೆಗೈದಿರುವುದಾಗಿ ಹೇಳಿದ್ದಾನೆ. ಆರೋಪಿಗಳನ್ನು ಪಾಲ್ಘರ್‌ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿ. 24ರಂದು ಪಿಂಕಿ ಸಾಂತಾಕ್ರೂಜ್‌ನಿಂದ ನಾಪತ್ತೆಯಾಗಿದ್ದರು. ಸಾಂತಾಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕ್ರೈಂ ಬ್ರಾಂಚ್‌ನ ಅಧಿಕಾರಿಗಳು ಸಾಂತಾಕ್ರೂಜ್‌ ಪೊಲೀಸರೊಂದಿಗೆ ತನಿಖೆ ಮುಂದುವರಿಸಿದಾಗ ಮೃತ ಪಿಂಕಿಗೆ ಬಾಯ್‌ ಫ್ರೆಂಡ್‌  ಇದ್ದಾನೆ ಎಂಬುದು ತಿಳಿಯಿತು.

ಪೊಲೀಸರು ಆರೋಪಿ ಜಿಕೋನನ್ನು ಬಂಧಿಸಿ  ವಿಚಾರಣೆ ನಡೆಸಿದಾಗ ಮೊದಲಿಗೆ ಆತ ಅಸ್ಪಷ್ಟ ಉತ್ತರ ನೀಡಿದ್ದ. ಅನುಮಾನಗೊಂಡ ಪೊಲೀಸರು ಆತನಿಗೆ ರೇಖಾಚಿತ್ರಗಳನ್ನು ತೋರಿಸಿದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Advertisement

ಆರೋಪಿ ಜಿಕೋ ಮತ್ತೂಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಮತ್ತೂಂದೆಡೆ ಪಿಂಕಿ ದುಬಾರಿ ಉಡುಗೊರೆಗಳಿಗೆ ನಿರಂತರ ಬೇಡಿಕೆಯಿಡುತ್ತಿದ್ದಳು. ಹಾಗಾಗಿ ಪಿಂಕಿಯನ್ನು ಶಾಶ್ವತವಾಗಿ ಮುಗಿಸಲು ಜಿಕೊ ನಿರ್ಧರಿಸಿದ್ದ.

ಆರೋಪಿಗಳು ಪಿಂಕಿಯನ್ನು ಪಾಲ್ಘರ್‌ಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಡಿ. 24ರಂದು ಜೆಟ್ಟಿ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಪಿಂಕಿಯನ್ನು ಕರೆದೊಯ್ದರು. ಈ ಸಂದರ್ಭ ಆರೋಪಿಗಳು ರಾತ್ರಿ ವೇಳೆ ಆಕೆಯನ್ನು ಗುಡ್ಡದಿಂದ ಕೆಳಗೆ ತಳ್ಳಿದರು. ಕಮರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಯು ತನ್ನ ಸ್ನೇಹಿತ ಕುಮಾರ್‌ಗೆ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗುವಂತೆ ಕೇಳಿದ್ದ. ಆತ ತನ್ನ ಇತರ ಸ್ನೇಹಿತರೊಂದಿಗೆ ಹಿಂದಿರುಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next