Advertisement

Mumbai: ಚೆಂಡು ಬಡಿದು ಫೀಲ್ಡಿಂಗ್ ಮಾಡುತ್ತಿದ್ದ ಆಟಗಾರ ಸಾವು

11:25 AM Jan 10, 2024 | Team Udayavani |

ಮುಂಬೈ: ಮಾಟುಂಗಾದ ದಾಡ್ಕರ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಬಾಲ್ ತಲೆಗೆ ಬಡಿದು 52 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

Advertisement

ಪಕ್ಕದ ಪಿಚ್‌ ನಿಂದ ಬಂದ ಚೆಂಡು ವ್ಯಕ್ತಿಯ ತಲೆಗೆ ಬಡಿದಿದೆ. ಚೆಂಡು ತನ್ನತ್ತ ಸಾಗುತ್ತಿರುವುದನ್ನು ಅವರು ಗಮನಿಸಿಲ್ಲ. ಮೃತ ವ್ಯಕ್ತಿ ಪಕ್ಕದ ಪಿಚ್‌ ನಲ್ಲಿ ಆಡುತ್ತಿದ್ದ ಬ್ಯಾಟರ್‌ ನ ಕಡೆಗೆ ಬೆನ್ನು ಹಾಕಿ ಫೀಲ್ಡಿಂಗ್ ಮಾಡುತ್ತಿದ್ದರು, ಆದ್ದರಿಂದ, ಚೆಂಡು ಅವರ ಕಡೆಗೆ ಬರುವುದನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತರಾಗಿದ್ದಾರೆಂದು ಘೋಷಿಸಲಾಯಿತು.

50 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಲೆಜೆಂಡ್ ಕಪ್ ಟಿ20 ಪಂದ್ಯಾವಳಿ ನಡೆಸಲಾಗುತ್ತಿದೆ. ಇಲ್ಲಿ ಏಕಕಾಲಕ್ಕೆ ಎರಡು ಪಂದ್ಯಗಳನ್ನು ನಡೆಸಲಾಗುತ್ತದೆ.

ಸ್ಥಳಾವಕಾಶದ ಕೊರತೆ ಮತ್ತು ಸಮಯದ ಕೊರತೆಯಿಂದಾಗಿ ಒಂದೇ ಮೈದಾನದಲ್ಲಿ ಎರಡು ಅಥವಾ ಹೆಚ್ಚಿನ ಪಂದ್ಯಗಳನ್ನು ಏಕಕಾಲದಲ್ಲಿ ಆಯೋಜಿಸಲಾಗುತ್ತದೆ. ಮತ್ತೊಂದು ಪಂದ್ಯದ ಚೆಂಡಿನಿಂದ ಒಬ್ಬ ಆಟಗಾರ ಗಾಯಗೊಂಡ ಪ್ರಕರಣ ಇದೇ ಮೊದಲು ಅಲ್ಲವಾದರೂ, ಜೀವ ಕಳೆದುಕೊಂಡ ಮೊದಲ ಘಟನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next