Advertisement
ಸಮಾರಂಭದಲ್ಲಿ ನಗರದ ತುಳು ಕನ್ನಡ ರಂಗಭೂಮಿಯ ನಾಮಾಂಕಿತ ನಾಟಕಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ, ತುಳು ಚಲನಚಿತ್ರ ನಿರ್ದೇಶಕ ನಿರ್ಮಾಪಕ ಮತ್ತು ಕಲಾಜಗತ್ತಿನ ರೂವಾರಿ ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರನ್ನು ಕಲೆಗೆ ನೀಡಿದ ಅನನ್ಯ ಸೇವೆಗಾಗಿ 2018ರ ಕಲಾ ತಪಸ್ವಿ ಬಿರುದು ನೀಡಿ ಸಮ್ಮಾನಿಸಲಾಯಿತು.
ವೆಬ್‌ಸೈಟ್‌ನ್ನು ರೂಪಿಸಿದ ಪ್ರಿತೇಶ್ ಬಿ. ಶೆಟ್ಟಿಗಾರ್ ಅವರು ಅದರ ಸಂಪೂರ್ಣ ಮಾಹಿತಿಯನ್ನು ಸಭೆಯ ಮುಂದಿಟ್ಟರು. ಪದ್ಮಶಾಲಿ ಮಹಿಳಾ ಬಳಗದ ಸದಸ್ಯರಿಂದ ನಡೆಸಲ್ಪಟ್ಟ ಅರಸಿನ ಕುಂಕುಮ ಕಾರ್ಯಕ್ರಮದಿಂದ ಪ್ರಾರಂಭಗೊಂಡ ಸಮಾರಂಭ, ಮಕ್ಕಳ ನೃತ್ಯ ಮತ್ತು ಗಾಯನದ ಜೊತೆಗೆ ವಿವಿಧ ಮನೋರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹೆಚ್ಚಿನ ಮೆರುಗು ಪಡೆಯಿತು. ಸಂಘದ ಅಧ್ಯಕ್ಷರಾದ ಉತ್ತಮ್ ಎ. ಶೆಟ್ಟಿಗಾರ್, ಎಜುಕೇಶನ್ ಸೊಸೈಟಿಯ ಕಾರ್ಯಾಧ್ಯಕ್ಷ ಬಿ. ರಾಮಚಂದ್ರ ಶೆಟ್ಟಿಗಾರ್, ಮಹಿಳಾ ಬಳಗದ ಪ್ರಮುಖೆ ಸರೋಜಿನಿ ಎಚ್. ಶೆಟ್ಟಿಗಾರ್ ಮತ್ತು ಪದ್ಮಶಾಲಿ ಕಲಾಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಾನಂದ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Related Articles
Advertisement
ಸಂಘದ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಂಡು ಸುದೀರ್ಘ ವರ್ಷಗಳ ಕಾಲ ಸೇವೆ ಮಾಡಿದ ಸಮಾಜದ ಹಿರಿಯ ಸದಸ್ಯರಾದ ಬಾಲಕೃಷ್ಣ ಎಂ. ಶೆಟ್ಟಿಗಾರ್ ಮತ್ತು ಸುಂದರ ಜಿ. ಶೆಟ್ಟಿಗಾರ್ ಅವರನ್ನು ಸಮ್ಮಾನಿಸಲಾಯಿತು. ಮಂಗಳೂರಿನ ನೃತ್ಯ ಕಲಾವಿದೆ ರûಾ ಶೆಟ್ಟಿಗಾರ, ಕನ್ನಡ ಚಲನಚಿತ್ರಕಾರ ನರೇಂದ್ರ ಕಬ್ಬಿನಾಲೆ ಹಾಗೂ ಚಾರಣ ಯಾತ್ರಿ ದಂಪತಿ ಜಗದೀಶ-ದಿವ್ಯಾ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ತಂಡದ ಕಲಾವಿದರುಗಳಿಂದ ಮೋಕ್ಷ ನಾಟಕ ಪ್ರದರ್ಶನಗೊಂಡಿತು. ಮೇಕಪ್ ಮ್ಯಾನ್ ಮಂಜುನಾಥ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ನರ್ಸಿಂಗ್ ಸುಪರಿಂಟೆಂಡೆಂಟ್ ವಿಜಯಲಕ್ಷ್ಮೀ ಶೆಟ್ಟಿಗಾರ್ ಅವರು ಮಹಿಳೆಯರಿಗೆ ಗರ್ಭಧಾರಣೆ ಬಗ್ಗೆ ವಿಶೇಷ ಮಾಹಿತಿಗಳನ್ನು ನೀಡಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.