Advertisement
ಈ ಅಂಶ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂಬಯಿ ವಾಯವ್ಯ ಕ್ಷೇತ್ರದ ಫಲಿತಾಂಶಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇದೇ ವೇಳೆ ಒಟಿಪಿ ಮೂಲಕ ಇವಿಎಂ ತೆರೆಯಲು ಸಾಧ್ಯವಿಲ್ಲ. ಇಂಥ ಆರೋಪಗಳು ಸತ್ಯಕ್ಕೆ ದೂರ ಎಂದು ಚುನಾವಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜೂ. 4ರಂದು ಮುಂಬಯಿ ವಾಯವ್ಯ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಮಂಗೇಶ್ ಪಂಡೀಲ್ಕರ್ ಮೊಬೈಲ್ ಸಹಿತ ಪ್ರವೇಶಿಸಿದ್ದರು, ಅವರು ಮೊಬೈಲ್‌ಗೆ ಬಂದ ಒಟಿಪಿ ಮೂಲಕ ಇವಿಎಂ ಅನ್ನು ತೆರೆ ದಿದ್ದರು ಎಂದು ಆರೋಪಿಸ ಲಾಗಿತ್ತು. ಫಲಿತಾಂಶ ಪ್ರಕಟಗೊಂಡಾಗ ವಾಯ್ಕರ್ ಅವರು ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಅಮೋಲ್ ಕೀರ್ತಿಕರ್ ಅವರನ್ನು 48 ಮತಗಳ ಅಂತರದಿಂದ ಸೋಲಿಸಿದ್ದರು. ಈ ಫಲಿತಾಂಶದ ವಿರುದ್ಧ ಚುನಾವಣ ಆಯೋಗಕ್ಕೆ ಉದ್ಧವ್ ಬಣ ದೂರು ಸಲ್ಲಿಸಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ಬಳಸಲು ಅನುಮತಿ ನೀಡಿದ ಚುನಾವಣ ಆಯೋಗದ ಸಿಬಂದಿಯೊಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Related Articles
ಹೊಸ ಆರೋಪಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಮುಂಬಯಿ ವಾಯವ್ಯ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ವಂದನಾ ಸೂರ್ಯವಂಶಿ, ಇವಿಎಂ ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ, ಅದನ್ನು ಮೊಬೈಲ್ ಒಟಿಪಿ ಮೂಲಕ ತೆರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅದಕ್ಕೆ ವೈಫೈ ಸಂಪರ್ಕ ಸಾಧ್ಯವೂ ಇಲ್ಲ ಎಂದಿದ್ದಾರೆ.
Advertisement