Advertisement

ರಾಜಭವನದಲ್ಲಿ  ಹರೇಲಾ ಪರ್ವ ಆಚರಣೆ

12:58 PM Jul 17, 2021 | Team Udayavani |

ಮುಂಬಯಿ: ಉತ್ತರಾ ಖಂಡದ ಜಾನಪದ ಹಬ್ಬವಾದ ಹರೇಲಾ ಪರ್ವ ಸಂದರ್ಭ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಶುಕ್ರವಾರ ರಾಜಭವನದಲ್ಲಿ ತಮ್ಮ ನಿವಾಸದ ಹೊರಗೆ ತುಳಸಿ ಸಸಿಗಳನ್ನು ನೆಟ್ಟರು.

Advertisement

ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬವು ಪ್ರಕೃತಿ ಮತ್ತು ಋತುಗಳೊಂದಿಗೆ ಸಂಬಂಧಿಸಿದೆ. ನಮ್ಮ ದೇಶದಲ್ಲಿ ಮಾತ್ರ ವಾಡ್‌, ಪಿಂಪಾಲ…, ಆಮ್ಲಾ ಮೊದಲಾದ ವಿವಿಧ ಮರಗಳು ಮತ್ತು ಪ್ರಾಣಿಗಳನ್ನು ಪೂಜಿಸಲಾಗುತ್ತದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಮತ್ತು  ಪ್ರಕೃತಿ ಸಂರಕ್ಷಣೆಗಾಗಿ ಮರಗಳನ್ನು ಬೆಳೆಸಬೇಕು ಎಂದು ರಾಜ್ಯಪಾಲ ಕೋಶ್ಯಾರಿ ಅವರು ಹೇಳಿದರು.

ಈ ಸಂದರ್ಭದಲ್ಲಿ  ಮುಂಬಯಿಯ ಮೂಲತಃ ಉತ್ತರಾಖಂಡದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ರಾಜ್ಯಪಾಲರನ್ನು ಗೌರವಿಸಿ ಹಸುರು ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಕೊಂಕಣ ಪ್ರಾಂತದ ಅಧ್ಯಕ್ಷ ಮಹೇಶ್‌ ಶರ್ಮಾ, ಭಾರತ್‌ ವಿಕಾಸ್‌ ಪರಿಷತ್‌, ಹಿಮಾಲಯ ಪರ್ವತ ಸಂಘದ ಅಧ್ಯಕ್ಷ ಚಾಮುಸಿನ್‌ ರಾಣಾ, ಕೆ.ಎಸ್‌. ಗೋಸಾಯಿ, ಅಮರ್ಜಿತ್‌ ಮಿಶ್ರಾ, ಅಜಯ್‌ ಬೊಹ್ರಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next