ಮುಂಬೈ: ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ರೂಪದರ್ಶಿಯೊಬ್ಬಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ನೆಪದಲ್ಲಿ ಪುರುಷರನ್ನು ತನ್ನ ನಿವಾಸಕ್ಕೆ ಕರೆಸಿಕೊಂಡು ವಿಡಿಯೋ ಗಳನ್ನು ಚಿತ್ರೀಕರಿಸಿ ನಂತರ ಬೆದರಿಸಿ ಸುಲಿಗೆ ಮಾಡಲು ಬಳಸಿಕೊಂಡಿದ್ದಾಳೆ.
50 ಕ್ಕೂ ಹೆಚ್ಚು ಪುರುಷರು ಬಲಿ ಪಶುವಾಗಿದ್ದಾರೆ ಎಂದು ಶಂಕಿಸಿ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಲಿಪಶುಗಳಲ್ಲಿ ಒಬ್ಬರು ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಲು ಧೈರ್ಯವನ್ನು ತೋರಿದಾಗ ಈ ಆತಂಕಕಾರಿ ದಂಧೆ ಬೆಳಕಿಗೆ ಬಂದಿದೆ. ದೂರುದಾರರ ಪ್ರಕಾರ, ನೇಹಾ ಅಲಿಯಾಸ್ ಮೆಹರ್ ಎಂದು ಗುರುತಿಸಲ್ಪಟ್ಟ ಮಹಿಳೆ, ಟೆಲಿಗ್ರಾಮ್ ನಲ್ಲಿ ಸ್ನೇಹ ಬೆಳೆಸಿದ ಬಳಿಕ ವಾಟ್ಸಾಪ್ ನಲ್ಲಿ ಚಾಟಿಂಗ್ ಆರಂಭಿಸಿದ್ದರು. ಮಹಿಳೆ ತನ್ನ ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ, ನಿನ್ನೊಂದಿಗೆ ದೇಹ ಸಂಪರ್ಕ ಹೊಂದುವ ಬಯಕೆಯನ್ನು ತೋರಿಕೊಂಡಿದ್ದಾಳೆ. ಆಕೆಯ ಮಾದಕ ಫೋಟೋಗಳನ್ನು ಹಂಚಿಕೊಂಡು ವಿಳಾಸವನ್ನು ನೀಡಿದ್ದಳು.
ಆ ವ್ಯಕ್ತಿ ಮಾರ್ಚ್ 3 ರಂದು ಮಧ್ಯಾಹ್ನ 3:30 ಕ್ಕೆ ಮೆಹರ್ ಮನೆಗೆ ಹೋಗಿದ್ದು, ಸ್ವಲ್ಪ ಸಮಯದ ನಂತರ, ಮೂವರು ಅಪರಿಚಿತರು ಬೆಡ್ ರೂಮ್ ಗೆ ಬಂದು ನೀವು ಇಲ್ಲಿ ಏಕೆ ಇದ್ದೀರಿ ಎಂದು ಕೇಳಿ ಹಲ್ಲೆ ನಡೆಸಿದ್ದಾರೆ. ಗುಂಪು ಆತನನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸುವುದಾಗಿ ಬೆದರಿಕೆ ಹಾಕಿತು. ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸಿ ಮೆಹರ್‌ನೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸಿ ಫೋನ್‌ಪೇ ಬಳಸಿ 21,500 ರೂ.ಗಳನ್ನು ಪಡೆದುಕೊಂಡಿದ್ದಾರೆ. ರಾತ್ರಿ 8 ಗಂಟೆಯವರೆಗೆ ತನ್ನನ್ನು ವಶದಲ್ಲಿಟ್ಟುಕೊಂಡಿದ್ದು, ಕ್ರೆಡಿಟ್ ಕಾರ್ಡ್ ವಹಿವಾಟಿನ ಮೂಲಕ ಮತ್ತೆ 2.5 ಲಕ್ಷ ರೂ. ಹಾಕಲು ಹೇಳಿದ್ದಾರೆ. ತನ್ನ ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ ಎಂದು ಹೇಳಿದ್ದು, ಕಾರ್ಡ್ ಪಡೆಯಲು ಆರೋಪಿಯೊಬ್ಬ ಜತೆಗೆ ಬಂದ ವೇಳೆ ನಾನು ತಪ್ಪಿಸಿಕೊಂಡಿದ್ದೇನೆ ಎಂದು ಸಂತ್ರಸ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸುಲಿಗೆ ದಂಧೆಯ ತನಿಖೆಯ ಸಮಯದಲ್ಲಿ, 50 ಕ್ಕೂ ಹೆಚ್ಚು ಪುರುಷರು ಬಲೆಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತರಿಗೆ ಬ್ಲಾಕ್ ಮೇಲ್ ಮಾಡಿ 35 ಲಕ್ಷ ರೂ.ಗೂ ಹೆಚ್ಚು ಹಣ ವಸೂಲಿ ಮಾಡುವಲ್ಲಿ ಗ್ಯಾಂಗ್ ಯಶಸ್ವಿಯಾಗಿತ್ತು.
ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಮುಂಬೈ ಮೂಲದ ಸ್ನೇಹ ಅಲಿಯಾಸ್ ಮೆಹರ್‌ನನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆ.1ರಂದು ಪಾದರಾಯನಪುರ ನಿವಾಸಿ ಯಾಸೀನ್(35) ಮತ್ತು ಶರಣಪ್ರಕಾಶ್ ಬಳಿಗೇರ್(37) ಹಾಗೂ ಅಬ್ದುಲ್ ಖಾದರ್(40) ಎಂಬವರನ್ನು ಬಂಧಿಸಲಾಗಿತ್ತು.