Advertisement

ಮುಂಬೈ ಮೆಟ್ರೋ ರೈಲು ಸಂಚಾರ ಅ.15ರಿಂದ ಪುನರಾರಂಭ: ಮಹಾ ಸರ್ಕಾರ ಘೋಷಣೆ

05:20 PM Oct 14, 2020 | Nagendra Trasi |

ಮುಂಬೈ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಕೆಲವು ತಿಂಗಳ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಸಂಚಾರವನ್ನು ಅಕ್ಟೋಬರ್ 15ರಿಂದ ಆರಂಭಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಬುಧವಾರ (ಅಕ್ಟೋಬರ್ 14, 2020) ಘೋಷಿಸಿದೆ. ಮುಂಜಾಗ್ರತಾ ಕ್ರಮದೊಂದಿಗೆ ಹಂತ, ಹಂತವಾಗಿ ರೈಲು ಸೇವೆ ಒದಗಿಸುವುದಾಗಿ ಹೇಳಿದೆ.

Advertisement

ಕೋವಿಡ್ 19 ಸೋಂಕಿನ ನಡುವೆಯೂ ಅಕ್ಟೋಬರ್ ತಿಂಗಳಿನ “ಮತ್ತೆ ಆರಂಭ” ಎಂಬ ಹೊಸ ನಿಯಮಾವಳಿ ಅಡಿಯಲ್ಲಿ ಹಲವಾರು ಇತರ ಸಡಿಲಿಕೆಯ ನಂತರ ಮಹಾರಾಷ್ಟ್ರ ಸರ್ಕಾರ ಮೆಟ್ರೋ ರೈಲು ಪುನರಾರಂಭದ ಬಗ್ಗೆ ಘೋಷಿಸಿದೆ ಎಂದು ವರದಿ ಹೇಳಿದೆ.

ಮೆಟ್ರೋ ರೈಲು ಸಂಚಾರದ ಜತೆಗೆ ಸಾರ್ವಜನಿಕ ಗ್ರಂಥಾಲಯ ತೆರೆಯಲು ರಾಜ್ಯ ಸರ್ಕಾರ ಅನುಮತಿ ನಿಡಿದೆ. ಕೋವಿಡ್ 19 ಹೆಚ್ಚಿರುವ ವಲಯ ಹೊರತುಪಡಿಸಿ ಇತರ ಭಾಗದಲ್ಲಿ ಸ್ಥಳೀಯ ವಾರದ ಸಂತೆಗಳಿಗೂ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ನಾಳೆಯಿಂದ ಮಾರ್ಕೆಟ್ ಮತ್ತು ಅಂಗಡಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಮುಖ್ಯ ಉದ್ದೇಶದೊಂದಿಗೆ ಅಂಗಡಿಯನ್ನು ರಾತ್ರಿ 9ರವರೆಗೆ ತೆರೆಯಲು ಹೆಚ್ಚುವರಿಯಾಗಿ ಎರಡು ಗಂಟೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next