Advertisement

ಯುವಕನನ್ನು ಒಳಗೆಳೆದುಕೊಂಡ MRI ಯಂತ್ರ; 2 ನಿಮಿಷದೊಳಗೆ ಸಾವು!

03:35 PM Jan 28, 2018 | Team Udayavani |

ಮುಂಬಯಿ : ಇಲ್ಲಿನ ನಾಯರ್‌ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ನಡೆದ ದಾರುಣ ಘಟನೆಯೊಂದರಲ್ಲಿ ಎಂಆರ್‌ಐ ಯಂತ್ರ ದೊಳಗೆ ಸೆಳೆಯಲ್‌ಪಟ್ಟ 32 ವರ್ಷದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. 

Advertisement

ತಾಯಿಯನ್ನು ಚಿಕಿತ್ಸೆಗಂದು ಆಸ್ಪತ್ರೆಗೆ ಕರೆತಂದಿದ್ದ ರಾಜೇಶ್‌ ಮಾರು ಎಂಬಾತ ಇನ್ನೋರ್ವ  ರೋಗಿಗೆ ಸಹಾಯ ಮಾಡಲು ಮುಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 

ಯಾವುದೇ ಕಾರಣಕ್ಕೂ ಎಂಆರ್‌ಐ ಯಂತ್ರವಿರುವ ರೂಂಗೆ ಲೋಹದ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದುರದೃಷ್ಟವೆಂದರೆ ರಾಜೇಶ್‌ ಕೈಯಲ್ಲಿ ಆಕ್ಸಿಜನ್‌ ಸಿಲಿಂಡರ್‌ ತೆಗೆದುಕೊಂಡು ಒಳಗೆ ಪ್ರವೇಶಿಸಿದ್ದರಿಂದ ಯಂತ್ರ ಒಮ್ಮೆಲೆ ಹೀರಿಕೊಂಡಿದೆ. 2 ನಿಮಿಷಗಳ ಒಳಗೆ ರಾಜೇಶ್‌ ಪ್ರಾಣ ಪಕ್ಷಿ ಹಾರಿ ಹೋಗಿದೆ. 

ಆಸ್ಪತ್ರೆಯ ಸಿಬಂದಿಯ ನಿರ್ಲಕ್ಷ್ಯದಿಂದಾಗಿ ಯುವಕನ ಪ್ರಾಣ ಹೋಗಿದೆ ಎಂದು ರಾಜೇಶ್‌ ಸಂಬಂಧಿಕರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next