Advertisement

ಮುಂಬಯಿ: 15 ವರ್ಷಗಳಲ್ಲಿ ಕಡಿಮೆ ಶಬ್ದ ಮಾಲಿನ್ಯ

12:18 AM Nov 18, 2020 | mahesh |

ಮುಂಬಯಿ: ಸಡಗರ ಮತ್ತು ಸಾಂಪ್ರದಾಯಿಕ ಹಬ್ಬವಾದ ದೀಪಾವಳಿಯ ಈ ವರ್ಷದ ಆಚರಣೆ ವೇಳೆ ಪಟಾಕಿ ಸಿಡಿಸಬಾರದು ಎಂಬ ಸರಕಾರದ ಕರೆಗೆ ಮುಂಬಯಿಗರ ರಿಂದ ಸರಕಾತ್ಮಕ ಪ್ರತಿಕ್ರಿಯೆ ದೊರೆತಿದೆ. ಆದ್ದರಿಂದ ಕಳೆದ 15 ವರ್ಷಗಳಲ್ಲಿ ಅತಿ ಕಡಿಮೆ ಶಬ್ದ ಮಾಲಿನ್ಯ ಶನಿವಾರ ಲಕ್ಷ್ಮೀ ಪೂಜೆಯಂದು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Advertisement

ಈ ವರ್ಷದ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ವಾಯುಮಾಲಿನ್ಯವನ್ನು ತಡೆಯಲು ಎಂಎಂಸಿ ಸಾರ್ವ ಜನಿಕ ಸ್ಥಳಗಳಲ್ಲಿ ಪಟಾಕಿ ಬಳಸುವುದನ್ನು ನಿಷೇಧಿಸಿತ್ತು. ಇದರ ಪರಿಣಾಮವಾಗಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಶಬ್ದ ಮಾಲಿನ್ಯವು ಈ ವರ್ಷ ಅತ್ಯಂತ ಕಡಿಮೆ ಎಂದು ದಾಖಲಾಗಿದೆ ಎಂದು ಆವಾಜ್‌ ಪ್ರತಿಷ್ಠಾನ ಎಂಬ ಎನ್‌ಜಿಒ ಈ ವರದಿಯನ್ನು ಸಿದ್ಧಪಡಿಸಿದೆ. ಆವಾಜ್‌ ಫೌಂಡೇಶನ್‌ನ ಸುಮೈರಾ ಅಬ್ದುಲ್ಲಿ ಅವರ ಪ್ರಕಾರ, ಈ ವರ್ಷ ದೀಪಾವಳಿಯಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಪಟಾಕಿಯ ಮೇಲೆ ನಿರ್ಬಂಧ ಹಾಕಿದ್ದರಿಂದ ಎಲ್ಲಕ್ಕಿಂತ ಕಡಿಮೆ ಶಬ್ದ ಮಾಲಿನ್ಯ ನೋಂದಾಯಿಸಲಾಯಿತು. ಅದೇ ಸಮಯದಲ್ಲಿ, ಶಬ್ದ ಮಾಲಿನ್ಯದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಹೆಚ್ಚುತ್ತಿದೆ. ಮುಂಬಯಿ ಈ ಹಿಂದೆ 2019 ರಲ್ಲಿ 112.3 ಡೆಸಿಲ್‌, 2018 ರಲ್ಲಿ 114.1 ಡೆಸಿಬಲ್‌ ಮತ್ತು 2017ರಲ್ಲಿ 117.8 ಡೆಸಿಬಲ್‌ ದಾಖಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next