ಮುಂಬೈ: ಮಹಾನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾತ್ರಿ ಕರ್ಫ್ಯೂ ಅಥವಾ ಭಾಗಶಃ ಲಾಕ್‌ಡೌನ್ ಜಾರಿಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಅಸ್ಲಾಮ್ ಶೇಖ್ ಮಂಗಳವಾರ ತಿಳಿಸಿದ್ದಾರೆ.
ವಿಧಾನಭವನ ಆವರಣದಲ್ಲಿ ಮಾತನಾಡಿದ ಅವರು, “ಲಾಕ್ ಡೌನ್‌ನ ಅವಶ್ಯಕತೆ ಇದ್ದರೆ ಸ್ಥಳೀಯ ಅಧಿಕಾರಿಗಳು ಆ ಕುರಿತು ನಿರ್ಧಾರ ಕೈಗೊಳ್ಳಲು ಸ್ವತಂತ್ರರು’ ಎಂದೂ ಹೇಳಿದರು.
“ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚುತ್ತಿದ್ದರೆ, ಆರಂಭಿಕವಾಗಿ ರಾತ್ರಿ ಕ್ಲಬ್‌ಗಳನ್ನು ಮುಚ್ಚಿಸಲಾಗುತ್ತದೆ. ಈಗಾಗಲೇ ಬೀಚ್ ಸೇರಿದಂತೆ ಪ್ರವಾಸಿಗರು ಸೇರುವ ತಾಣಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಗೇಟ್ ವೇ ಆಫ್ ಇಂಡಿಯಾ ಬಳಿಯೂ ಪ್ರವಾಸಿಗರು ಜಮಾಯಿಸುವುದನ್ನು ನಿರ್ಬಂಧಿಸಲಾಗಿದೆ’ ಎಂದು ತಿಳಿಸಿದರು.
ಇದನ್ನೂ ಓದಿ :ಜಗತ್ತಿನ ಸುಂದರ ಮಗ್ಗುಲನ್ನು ಪರಿಚಯಿಸಿದ ಡಾರನ್ ಫರ್ಗಸ್ಸನ್
ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ನಿತ್ಯ 1 ಸಾವಿರಕ್ಕೂ ಅಧಿಕ ಕೇಸ್‌ಗಳು ದಾಖಲಾಗುತ್ತಿವೆ.