Advertisement

ಮಲ್ಯ ಇರಿಸುವ ಮುಂಬಯಿ ಜೈಲು ಕೋಣೆಯ ವಿಡಿಯೋ ನೀಡಿ: ಲಂಡನ್‌ ಕೋರ್ಟ್‌

04:36 PM Jul 31, 2018 | udayavani editorial |

ಲಂಡನ್‌ : ಗಡೀಪಾರಾಗಿ ಬರುವ ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಇರಿಸಲಾಗುವ ಮುಂಬಯಿಯ ಆರ್ಥರ್‌ ರೋಡ್‌ ಜೈಲು ಕೋಣೆಯ ವಿಡಿಯೋ ಚಿತ್ರಿಕೆಯನ್ನು ತನಗೆ ಮೂರು ವಾರಗಳ ಒಳಗೆ ಸಲ್ಲಿಸುವಂತೆ ಬ್ರಿಟನ್‌ ಕೋರ್ಟ್‌ ಭಾರತೀಯ ಅಧಿಕಾರಿಗಳನ್ನು ಕೇಳಿಕೊಂಡಿದೆ.

Advertisement

ಇದೇ ವೇಳೆ ಮಲ್ಯ ಗಡೀಪಾರು ವಿಚಾರಣೆಯ ಮುಂದಿನ ದಿನಾಂಕವನ್ನು ನ್ಯಾಯಾಲಯವು ಸೆ.12ಕ್ಕೆ ನಿಗದಿಸಿದೆ. ಅಂದು ವಾದ -ಪ್ರತಿವಾದಗಳ ವಿಚಾರಣೆ ಮುಗಿಯಲಿದೆ.

ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ಲಂಡನ್‌ಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಯ ಅವರಿಂದು ಲಂಡನಿನ ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟರ ಕೋರ್ಟಿನಲ್ಲಿ ಹಾಜರಾದರು. 

ಮಲ್ಯ ಗಡೀಪಾರಾಗಿ ಬಂದ ಬಳಿಕ ಅವರನ್ನು ಇರಿಸಲಾಗುವ ಮುಂಬಯಿಯ ಆರ್ಥರ್‌ ರೋಡ್‌ ಜೈಲಿನ 12ನೇ ನಂಬರ್‌ ಕೋಣೆಯ ಕುರಿತಾದ ಸ್ಪಷ್ಟೀಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಶನ್‌ಮತ್ತು ಡಿಫೆನ್ಸ್‌ ವಾದ – ಪ್ರತಿವಾದ ಮಂಡಿಸಿದವು. 

Advertisement

Udayavani is now on Telegram. Click here to join our channel and stay updated with the latest news.

Next