Advertisement

ಜೈ ಹೇಳಿದ ಮುಂಬೈ ಇಂಡಿಯನ್ಸ್‌

11:41 PM Sep 28, 2021 | Team Udayavani |

ಅಬುಧಾಬಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಯುಎಇ ಆವೃತ್ತಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಆಚರಿಸಿದೆ. ಹ್ಯಾಟ್ರಿಕ್‌ ಸೋಲಿಗೆ ತುತ್ತಾಗಿ ತೀವ್ರ ಹತಾಶೆಯಲ್ಲಿದ್ದ ರೋಹಿತ್‌ ಪಡೆ ಮಂಗಳವಾರ ರಾತ್ರಿಯ ಸಣ್ಣ ಮೊತ್ತದ ಮೇಲಾಟದಲ್ಲಿ ಪಂಜಾಬ್‌ ಕಿಂಗ್ಸ್‌ಗೆ 6 ವಿಕೆಟ್‌ ಸೋಲುಣಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ 6 ವಿಕೆಟಿಗೆ 135 ರನ್ನುಗಳ ಸಾಮಾನ್ಯ ಸ್ಕೋರ್‌ ದಾಖಲಿಸಿದರೆ, ಮುಂಬೈ 19 ಓವರ್‌ಗಳಲ್ಲಿ 4 ವಿಕೆಟಿಗೆ 137 ರನ್‌ ಮಾಡಿತು.

37 ಎಸೆತಗಳಿಂದ 45 ರನ್‌ ಬಾರಿಸಿದ ಸೌರಭ್‌ ತಿವಾರಿ (3 ಬೌಂಡರಿ, 2 ಸಿಕ್ಸರ್‌) ಮುಂಬೈ ಓಟವನ್ನು ಚುರುಕುಗೊಳಿಸಿದರು. ಬಳಿಕ ಹಾರ್ದಿಕ್‌ ಪಾಂಡ್ಯ ಮತ್ತು ಕೈರನ್‌ ಪೊಲಾರ್ಡ್‌ ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತರು. ಇವರಿಂದ ಮುರಿಯದ 5ನೇ ವಿಕೆಟಿಗೆ 30 ಎಸೆತಗಳಿಂದ 40 ರನ್‌ ಒಟ್ಟುಗೂಡಿತು. ಪಾಂಡ್ಯ ಅಜೇಯ 40 ರನ್‌ (30 ಎಸೆತ, 4 ಬೌಂಡರಿ, 2 ಸಿಕ್ಸರ್‌), ಪೊಲಾರ್ಡ್‌ 7 ಎಸೆತಗಳಿಂದ ಔಟಾಗದೆ 15 ರನ್‌ ಬಾರಿಸಿದರು (1 ಬೌಂಡರಿ, 1 ಸಿಕ್ಸರ್‌). ಶಮಿ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಪಾಂಡ್ಯ ಮುಂಬೈ ಗೆಲುವನ್ನು ಘೋಷಿಸಿದರು.

ಪೊಲಾರ್ಡ್‌ ಅವಳಿ ಹೊಡೆತ
ಈ ಪಂದ್ಯದಿಂದ ಪಂಜಾಬ್‌ ಮಾಯಾಂಕ್‌ ಅಗರ್ವಾಲ್‌ ಅವರನ್ನು ಹೊರಗಿರಿಸಲಾಗಿತ್ತು. ಇವರ ಬದಲು ಮನ್‌ದೀಪ್‌ ಸಿಂಗ್‌ ಇನ್ನಿಂಗ್ಸ್‌ ಆರಂಭಿಸಿದರು. ರಾಹುಲ್‌ (21) ಮತ್ತು ಮನ್‌ದೀಪ್‌ (15) ಸಿಡಿಯುವ ಸೂಚನೆ ನೀಡುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಈ ನಡುವೆ ಯುನಿವರ್ಸ್‌ ಬಾಸ್‌ ಗೇಲ್‌ ಠುಸ್‌ ಆದರು. ಅವರ ಗಳಿಕೆ ಒಂದೇ ರನ್‌. ರಾಹುಲ್‌ ಮತ್ತು ಗೇಲ್‌ ಅವರನ್ನು ಕೈರನ್‌ ಪೊಲಾರ್ಡ್‌ ಒಂದೇ ಓವರ್‌ನಲ್ಲಿ ಉರುಳಿಸಿ ಪಂಜಾಬ್‌ಗ ಬಲವಾದ ಆಘಾತವಿಕ್ಕಿದರು.

ಇದನ್ನೂ ಓದಿ:ಐಪಿಎಲ್‌: ಡೆಲ್ಲಿ ಮೇಲೆ ಕೋಲ್ಕತಾ ರೈಡ್‌

Advertisement

ನಿಕೋಲಸ್‌ ಪೂರಣ್‌ (2) ಅವರ ರನ್‌ ಬರಗಾಲ ಮತ್ತೆ ಮುಂದುವರಿಯಿತು. 8ನೇ ಓವರ್‌ ವೇಳೆ 48 ರನ್ನಿಗೆ 4 ವಿಕೆಟ್‌ ಬಿತ್ತು. ಪಂಜಾಬ್‌ನ ಕೊನೆಯ ನಂಬುಗೆಯ ಬ್ಯಾಟಿಂಗ್‌ ಜೋಡಿಯಾದ ಐಡನ್‌ ಮಾರ್ಕ್‌ರಮ್‌ ಮತ್ತು ದೀಪಕ್‌ ಹೂಡಾ 5ನೇ ವಿಕೆಟಿಗೆ ಜತೆಗೂಡಿದ ಬಳಿಕ ಸ್ಕೋರ್‌ಬೋರ್ಡ್‌ ನಿಧಾನವಾಗಿ ಬೆಳೆಯತೊಡಗಿತು. ತಂಡಕ್ಕೆ ಮತ್ತೆ ಹಾನಿಯಾಗದಂತೆ ನೋಡಿಕೊಂಡು ಮೊತ್ತವನ್ನು ನೂರರ ಗಡಿ ದಾಟಿಸಿದರು. ಈ ಹಂತದಲ್ಲಿ ದ್ವಿತೀಯ ಸ್ಪೆಲ್‌ ಬೌಲಿಂಗ್‌ ದಾಳಿಗಿಳಿದ ಟ್ರೆಂಟ್‌ ಬೌಲ್ಟ್ ದುಬಾರಿಯಾದರು.

ಮಾರ್ಕ್‌ರಮ್‌-ಹೂಡಾ ಆಸರೆ
ಮಾರ್ಕ್‌ರಮ್‌-ಹೂಡಾ ಅವರಿಂದ 47 ಎಸೆತಗಳಿಂದ 61 ರನ್‌ ಒಟ್ಟುಗೂಡಿತು. 16ನೇ ಓವರ್‌ ಎಸೆಯಲು ಬಂದ ರಾಹುಲ್‌ ಚಹರ್‌ ಈ ಜೋಡಿಯನ್ನು ಬೇರ್ಪಡಿಸಿದರು. 29 ಎಸೆತಗಳಿಂದ 42 ರನ್‌ (6 ಬೌಂಡರಿ) ಮಾಡಿದ ಮಾರ್ಕ್‌ರಮ್‌ ಬೌಲ್ಡ್‌ ಆದರು. ಜಸ್‌ಪ್ರೀತ್‌ ಬುಮ್ರಾ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ದೀಪಕ್‌ ಹೂಡಾ (26) ಕೈರನ್‌ ಪೊಲಾರ್ಡ್‌ಗೆ ಕ್ಯಾಚ್‌ ನೀಡಿ ವಾಪಸಾದರು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಕೆ.ಎಲ್‌. ರಾಹುಲ್‌ ಸಿ ಬುಮ್ರಾ ಬಿ ಪೊಲಾರ್ಡ್‌ 21
ಮನ್‌ದೀಪ್‌ ಸಿಂಗ್‌ ಎಲ್‌ಬಿಡಬ್ಲ್ಯು ಕೃಣಾಲ್‌ 15
ಕ್ರಿಸ್‌ ಗೇಲ್‌ ಸಿ ಹಾರ್ದಿಕ್‌ ಬಿ ಪೊಲಾರ್ಡ್‌ 1
ಐಡೆನ್‌ ಮಾರ್ಕ್‌ರಮ್‌ ಬಿ ಚಹರ್‌ 42
ನಿಕೋಲಸ್‌ ಪೂರಣ್‌ ಎಲ್‌ಬಿಡಬ್ಲ್ಯು ಬುಮ್ರಾ 2
ದೀಪಕ್‌ ಹೂಡಾ ಸಿ ಪೊಲಾರ್ಡ್‌ ಬಿ ಬುಮ್ರಾ 28
ಹರ್‌ಪ್ರೀತ್‌ ಬ್ರಾರ್‌ ಔಟಾಗದೆ 14
ನಥನ್‌ ಎಲ್ಲಿಸ್‌ ಔಟಾಗದೆ 6
ಇತರ 6
ಒಟ್ಟು(6 ವಿಕೆಟಿಗೆ) 135
ವಿಕೆಟ್‌ ಪತನ:1-36, 2-39, 3-41, 4-48, 5-109, 6-123.
ಬೌಲಿಂಗ್‌;
ಕೃಣಾಲ್‌ ಪಾಂಡ್ಯ 4-0-24-1
ಟ್ರೆಂಟ್‌ ಬೌಲ್ಟ್ 3-0-30-0
ಜಸ್‌ಪ್ರೀತ್‌ ಬುಮ್ರಾ 4-0-24-2
ನಥನ್‌ ಕೋಲ್ಟರ್‌ನೆçಲ್‌ 4-0-19-0
ಕೈರನ್‌ ಪೊಲಾರ್ಡ್‌ 1-0-8-2
ರಾಹುಲ್‌ ಚಹರ್‌ 4-0-27-1
ಮುಂಬೈ ಇಂಡಿಯನ್ಸ್‌
ರೋಹಿತ್‌ ಸಿ ಮನ್‌ದೀಪ್‌ ಬಿ ಬಿಷ್ಣೋಯಿ 8
ಕ್ವಿಂಟನ್‌ ಡಿ ಕಾಕ್‌ ಬಿ ಶಮಿ 27
ಸೂರ್ಯಕುಮಾರ್‌ ಬಿ ಬಿಷ್ಣೋಯಿ 0
ಸೌರಭ್‌ ತಿವಾರಿ ಸಿ ರಾಹುಲ್‌ ಬಿ ಎಲ್ಲಿಸ್‌ 45
ಹಾರ್ದಿಕ್‌ ಪಾಂಡ್ಯ ಔಟಾಗದೆ 40
ಕೈರನ್‌ ಪೊಲಾರ್ಡ್‌ ಔಟಾಗದೆ 15
ಇತರ 2
ಒಟ್ಟು(19 ಓವರ್‌ಗಳಲ್ಲಿ 4 ವಿಕೆಟಿಗೆ) 137
ವಿಕೆಟ್‌ ಪತನ:1-16, 2-16, 3-61, 4-92.
ಬೌಲಿಂಗ್‌;
ಐಡೆನ್‌ ಮಾರ್ಕ್‌ರಮ್‌ 3-0-18-0
ಮೊಹಮ್ಮದ್‌ ಶಮಿ 4-0-42-1
ಆರ್ಷದೀಪ್‌ ಸಿಂಗ್‌ 4-0-29-0
ರವಿ ಬಿಷ್ಣೋಯಿ 4-0-25-2
ನಥಲ್‌ ಎಲ್ಲಿಸ್‌ 3-0-12-1
ಹರ್‌ಪ್ರೀತ್‌ ಬ್ರಾರ್‌ 1-0-11-0

Advertisement

Udayavani is now on Telegram. Click here to join our channel and stay updated with the latest news.

Next