ಅಬುಧಾಬಿ: ಆರ್‌ಸಿಬಿ ವಿರುದ್ಧ ಮೆರೆದಾಡಿದ ಕೋಲ್ಕತಾ ನೈಟ್‌ರೈಡರ್ ಮತ್ತು ಚೆನ್ನೈ ಎದುರು ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ಗುರುವಾರದ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಮೇಲ್ನೋಟಕ್ಕೆ ಇದೊಂದು ಸಮಬಲರ ಸವಾಲ್ ಆಗಿಗೋಚರಿಸುತ್ತಿದೆ. ಆದರೆ ರೋಹಿತ್ ಪುನರಾಗಮನದಿಂದ ಮುಂಬೈಗೆ ಹೆಚ್ಚಿನ ಬಲ ಬಂದಿದೆ.
ಎರಡೂ ತಂಡಗಳು ಯುಎಇ ಲೆಗ್ ನ ತಮ್ಮ ಎರಡನೇ ಪಂದ್ಯವಾಡುತ್ತಿದೆ. ಶೇಕ್ ಝಯೀದ್ ಸ್ಟೇಡಿಯಂ ನಲ್ಲಿ ಈ ಹೈವೋಲ್ಟೇಜ್ ಕದನ ನಡೆಯಲಿದೆ.
ಫಿಟ್‌ನೆಸ್ ಸಮಸ್ಯೆಯಿಂದಾಗಿ ಚೆನ್ನೈ ಎದುರಿನ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮ, ಕೆಕೆಆರ್ ವಿರುದ್ಧ ತಂಡಕ್ಕೆ ಮರಳಲಿದ್ದು, ನಾಯಕತ್ವ ವಹಿಸಲಿದ್ದಾರೆ. ಕಿವೀಸ್‌ನ ಅವಳಿ ವೇಗಿಗಳಾದ ಟ್ರೆಂಟ್ ಬೌಲ್ಟ್-ಆ್ಯಡಂ ಮಿಲ್ನೆ, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ರಾಹುಲ್ ಚಹರ್ ಮುಂಬೈ ಬೌಲಿಂಗ್ ವಿಭಾಗದ ಹೀರೋಗಳು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪೂರ್ತಿ ಫಿಟ್ ಆಗದ ಕಾರಣ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ.
ಇದನ್ನೂ ಓದಿ:ಆರ್ ಸಿಬಿ ಕ್ಯಾಂಪ್ ನಲ್ಲಿ ಮಿಂಚುತ್ತಿರುವ ಯುವತಿ: ಯಾರಿದು? ಆರ್ ಸಿಬಿಯಲ್ಲಿ ಈಕೆಯ ಕೆಲಸವೇನು?
ಬಲಿಷ್ಠ ಆರ್‌ಸಿಬಿಗೆ ಹೀನಾಯ ಸೋಲುಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮಾರ್ಗನ್ ಸಾರಥ್ಯದ ಕೆಕೆಆರ್ ಬ್ಯಾಟಿಂಗ್-ಬೌಲಿಂಗ್ ವಿಭಾಗಗಳೆರಡರಲ್ಲೂ ಸಮರ್ಥವಾಗಿದೆ. ಯುವ ಆಟಗಾರರಾದ ಶುಭಮನ್ ಗಿಲ್, ಹೊಸತಾರೆ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಸೆಲ್, ಮಾರ್ಗನ್ ಬ್ಯಾಟಿಂಗ್ ಸರದಿಯ ಬಲಿಷ್ಠರು. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ರಸೆಲ್, ಸುನೀಲ್ ನಾರಾಯಣ್, ಪ್ರಸಿದ್ಧ್ ಕೃಷ್ಣ ಈಗಾಗಲೇ ಆರ್‌ಸಿಬಿ ವಿರುದ್ಧ ತಮ್ಮ ಬೌಲಿಂಗ್ ಅಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ
ಸಂಭಾವ್ಯ ತಂಡಗಳು
ಮುಂಬೈ: ರೋಹಿತ್ ಶರ್ಮಾ (ನಾ), ಕ್ವಿಂಟನ್ ಡಿ ಕಾಕ್ (ವಿ.ಕೀ), ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೈರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆ್ಯಡಂ ಮಿಲ್ನೆ, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
ಕೋಲ್ಕತ್ತಾ: ವೆಂಕಟೇಶ್ ಅಯ್ಯರ್, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್ (ನಾ), ದಿನೇಶ್ ಕಾರ್ತಿಕ್ (ವಿ.ಕೀ), ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗ್ಯೂಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ