ಮುಂಬೈ : ವಾಂಖೆಡೆ ಸ್ಟೇಡಿಯಂಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮ್ಯಾನ್ ಸೂರ್ಯಕುಮಾರ್ ಯಾದವ್ ಭರ್ಜರಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಮುಂಬೈ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿದೆ.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಶಾನ್ ಕಿಶನ್ 31, ನಾಯಕ ರೋಹಿತ್ ಶರ್ಮಾ 29 ರನ್ ಗಳಿಸಿ ಔಟಾದರು.
ಭರ್ಜರಿ ಆಟವಾಡಿದ ಸೂರ್ಯಕುಮಾರ್ ಯಾದವ್ ಔಟಾಗದೆ 103 ರನ್ ಗಳಿಸಿದರು. 49 ಎಸೆತಗಳಲ್ಲಿ ಶತಕ ಸಿಡಿಸಿದರು. 11 ಬೌಂಡರಿ ಮತ್ತು 6 ಆಕರ್ಷಕ ಸಿಕ್ಸರ್ ಸಿಡಿಸಿದ್ದರು. ಅಲ್ಜಾರಿ ಜೋಸೆಫ್ ಎಸೆದ ಕೊನೆಯ (19.6 ) ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅಮೋಘ ಸಿಕ್ಸರ್ ಬಾರಿಸಿ ಶತಕ ಪೂರ್ಣ ಗೊಳಿಸಿದರು.
ಮುಂಬೈ ಐಪಿಎಲ್ ಋತುವಿನಲ್ಲಿ ಐದು 200-ಪ್ಲಸ್ ಮೊತ್ತವನ್ನು ನೋಂದಾಯಿಸಿದ ಮೊದಲ ತಂಡವಾಗಿದೆ.
ನೆಹಾಲ್ ವಧೇರಾ 15, ವಿಷ್ಣು ವಿನೋದ್ 30 ರನ್ ಗಳ ಸಾಥ್ ನೀಡಿದರು. ಗುಜರಾತ್ ಟೈಟಾನ್ಸ್ ಪರ ರಶೀದ್ ಖಾನ್ 4 ವಿಕೆಟ್ ಪಡೆದು ಗಮನ ಸೆಳೆದರು.