Advertisement

ಒಂದೇ ದೋಣಿಯಲ್ಲಿ ಮುಂಬೈ ಇಂಡಿಯನ್ಸ್‌ -ಪಂಜಾಬ್‌ ಕಿಂಗ್ಸ್‌

10:18 PM Sep 27, 2021 | Team Udayavani |

ಅಬುಧಾಬಿ: 10 ಪಂದ್ಯ, 4 ಗೆಲುವು, 6 ಸೋಲು, 8 ಅಂಕ… ಇದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ಪ್ರಸ್ತುತ ಸ್ಥಿತಿ. ಎರಡೂ ಒಂದೇ ದೋಣಿಯಲ್ಲಿ ಪಯಣಿಸುತ್ತಿವೆ.

Advertisement

ಆದರೆ ಆರ್‌ಸಿಬಿ ವಿರುದ್ಧ ರವಿವಾರ ರಾತ್ರಿ ಎಡವಿ, ಯುಎಇಯಲ್ಲಿ ಹ್ಯಾಟ್ರಿಕ್‌ ಸೋಲಿಗೆ ತುತ್ತಾದ ಬಳಿಕ ರೋಹಿತ್‌ ತಂಡ 7ನೇ ಸ್ಥಾನಕ್ಕೆ ಜಾರಿದೆ. ರನ್‌ರೇಟ್‌ನಲ್ಲಿ ಪಂಜಾಬ್‌ ತುಸು ಮುಂದಿದೆ. ಇತ್ತಂಡಗಳು ಮಂಗಳವಾರ ರಾತ್ರಿ ಪರಸ್ಪರ ಎದುರಾಗಲಿವೆ.

ಮುಂಬೈ ತಂಡದ ದೊಡ್ಡ ಸಮಸ್ಯೆಯೆಂದರೆ ಬ್ಯಾಟಿಂಗ್‌ ವಿಭಾಗದ್ದು. ಮುಖ್ಯವಾಗಿ ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ ತೀವ್ರ ರನ್‌ ಬರಗಾಲದಲ್ಲಿದ್ದಾರೆ.

ಇದನ್ನೂ ಓದಿ:ಹ್ಯಾಟ್ರಿಕ್‌ ಹೀರೋ ಹರ್ಷಲ್‌ ಪಟೇಲ್‌

ಪಂಜಾಬ್‌ ತವರಿನ ಹಾಗೂ ವಿದೇಶಿ ಕ್ರಿಕೆಟಿಗರಿಂದ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಆದರೆ ಕೂಟದಲ್ಲೇ ಅತ್ಯಂತ ಅಸ್ಥಿರ ತಂಡವೆಂಬ ಕಳಂಕ ಮೆತ್ತಿಕೊಂಡಿದೆ. ರಾಜಸ್ಥಾನ್‌ ವಿರುದ್ಧ ಅಂತಿಮ ಓವರ್‌ನಲ್ಲಿ 4 ರನ್‌ ಗಳಿಸಲು ಸಾಧ್ಯವಾಗಲಿಲ್ಲ ಎಂಬ ನಿದರ್ಶನವೊಂದೇ ಇದಕ್ಕೆ ಸಾಕು.

Advertisement

ಹಾಗೆಯೇ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿದ್ದೂ ಹೈದರಾಬಾದ್‌ ವಿರುದ್ಧ ಕೇವಲ 125 ರನ್‌ ಗಳಿಸಿದ ಪಂಜಾಬ್‌ ತನ್ನ “ಫೈಯರ್‌ ಪವರ್‌’ಗೆ ವ್ಯತಿರಿಕ್ತ ಪ್ರದರ್ಶನ ನೀಡಿತ್ತು.

ಚೆನ್ನೈಯಲ್ಲಿ ಆಡಲಾದ ಮೊದಲ ಸುತ್ತಿನ ಪಂದ್ಯದಲ್ಲಿ ಪಂಜಾಬ್‌ 9 ವಿಕೆಟ್‌ಗಳಿಂದ ಮುಂಬೈಯನ್ನು ಮಣಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next