Advertisement

ಆರ್‌ಸಿಬಿ ಜಯದಿಂದ ಮುಂಬೈ ಇಂಡಿಯನ್ಸ್‌ ಔಟ್‌ ಅಧಿಕೃತ

10:56 PM May 09, 2022 | Team Udayavani |

ಮುಂಬಯಿ: ರವಿವಾರ ರಾತ್ರಿಯ ಪಂದ್ಯದಲ್ಲಿ ಆರ್‌ಸಿಬಿ ಗೆಲು ನಿಂದಾಗಿ ಮುಂಬೈ ಇಂಡಿಯನ್ಸ್‌ ನಿರ್ಗಮನ ಅಧಿಕೃತಗೊಂಡಿದೆ.

Advertisement

ಇದರೊಂದಿಗೆ 2022ರ ಪಂದ್ಯಾವಳಿ ಯಿಂದ ಹೊರ ಬಿದ್ದ ಮೊದಲ ತಂಡವೆಂಬ ಅವಮಾನಕ್ಕೆ ಸಿಲುಕಿದೆ.

ಸತತ 8 ಪಂದ್ಯಗಳಲ್ಲಿ ಸೋಲುಂ ಡಾಗಲೇ ಮುಂಬೈ ನಿರ್ಗಮನದ ಬಗ್ಗೆ ಯಾವುದೇ ಅನುಮಾನ ಉಳಿದಿರಲಿಲ್ಲ. ಆದರೆ ಇದು ಅಧಿಕೃತಗೊಂಡಿರಲಿಲ್ಲ, ಅಷ್ಟೇ. ರೋಹಿತ್‌ ಪಡೆ 10 ಪಂದ್ಯ ಗಳಲ್ಲಿ ಎರಡನ್ನಷ್ಟೇ ಗೆದ್ದು 4 ಅಂಕ ಸಂಪಾದಿಸಿದೆ.

ಉಳಿದದ್ದು ಕೇವಲ 4 ಪಂದ್ಯ. ಇವೆಲ್ಲವನ್ನೂ ಗೆದ್ದರೂ ಮುಂಬೈ ಅಂಕ 12ಕ್ಕೇರಲಿದೆ. ಆದರೆ ಅಗ್ರ ನಾಲ್ಕರಲ್ಲಿರುವ ತಂಡಗಳೆಲ್ಲ ಈಗಾಗಲೇ 14 ಹಾಗೂ ಹೆಚ್ಚಿನ ಅಂಕಗಳನ್ನು ಹೊಂದಿರುವುದರಿಂದ ಮುಂಬೈಗೆ ಪ್ಲೇ ಆಫ್ ಅಸಾಧ್ಯ.

ಅಕಸ್ಮಾತ್‌ ಎಸ್‌ಆರ್‌ಎಚ್‌ ವಿರುದ್ಧ ಆರ್‌ಸಿಬಿ ಎಡವಿದ್ದೇ ಆದಲ್ಲಿ ಮುಂಬೈ ರೇಸ್‌ನಲ್ಲಿರುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next