Advertisement

ಆರಂಭಿಕ ಪಂದ್ಯ: ಮುಂಬೈಗೆ ಸತತ 10 ಸೋಲು!

12:17 AM Mar 29, 2022 | Team Udayavani |

ಮುಂಬೈ ಇಂಡಿಯನ್ಸ್‌ 2013ರಿಂದ ಮೊದಲ್ಗೊಂಡು ಐಪಿಎಲ್‌ ಋತುವಿನ ತನ್ನ ಆರಂಭಿಕ ಪಂದ್ಯಗಳಲ್ಲಿ ಸತತ 10 ಸೋಲನುಭವಿಸಿತು. 2012ರಲ್ಲಿ ಕೊನೆಯ ಗೆಲುವು ಸಾಧಿಸಿತ್ತು. ಚೆನ್ನೈಯಲ್ಲಿ ನಡೆದ ಅಂದಿನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಚೆನ್ನೈ 19.5 ಓವರ್‌ಗಳಲ್ಲಿ 112ಕ್ಕೆ ಕುಸಿದರೆ, ಮುಂಬೈ 16.5 ಓವರ್‌ಗಳಲ್ಲಿ 2 ವಿಕೆಟಿಗೆ 115 ರನ್‌ ಬಾರಿಸಿ ಗೆದ್ದು ಬಂದಿತ್ತು. ಮುಂಬೈ ತಂಡದ ಅಂದಿನ ನಾಯಕ ಹರ್ಭಜನ್‌ ಸಿಂಗ್‌. ಸ್ಯಾರಸ್ಯವೆಂದರೆ, ಕೂಟದ ಮೊದಲ ಪಂದ್ಯವನ್ನು ಸೋಲಲಾರಂಭಿಸಿದ ಬಳಿಕವೇ ಮುಂಬೈ ಐಪಿಎಲ್‌ ಪ್ರಶಸ್ತಿ ಗೆಲ್ಲತೊಡಗಿದ್ದು! ಅದು 2013ರಲ್ಲಿ ಮೊದಲ ಸಲ ಚಾಂಪಿಯನ್‌ ಆಗಿತ್ತು.

Advertisement

ಮುಂಬೈ-ಡೆಲ್ಲಿ
– ಇಶಾನ್‌ ಕಿಶನ್‌ ಸತತ 3ನೇ ಅರ್ಧ ಶತಕ ಬಾರಿಸಿದರು (ಅಜೇಯ 50, 84 ಮತ್ತು ಅಜೇಯ 81).
– ಇಶಾನ್‌ ಕಿಶನ್‌ ಡೆಲ್ಲಿ ವಿರುದ್ಧ ಅತ್ಯಧಿಕ 386 ರನ್‌ ಬಾರಿಸಿದರು. ಹೈದರಾಬಾದ್‌ ವಿರುದ್ಧ 247 ರನ್‌ ಗಳಿಸಿದ ದಾಖಲೆಯನ್ನು ಹಿಂದಿಕ್ಕಿದರು.
– 2020ರಿಂದ ಮೊದಲ್ಗೊಂಡು ಇಶಾನ್‌ ಕಿಶನ್‌ ಮುಂಬೈ ಪರ ಸರ್ವಾಧಿಕ 838 ರನ್‌ ಬಾರಿಸಿದರು.
– ರೋಹಿತ್‌ ಶರ್ಮ ಪಂದ್ಯದ ಮೊದಲ ಓವರ್‌ನಲ್ಲಿ 10 ಸಿಕ್ಸರ್‌ ಬಾರಿಸಿದರು. ಭಾರತೀಯ ಸಾಧಕರಲ್ಲಿ ಅವರಿಗೆ 2ನೇ ಸ್ಥಾನ. ವೀರೇಂದ್ರ ಸೆಹವಾಗ್‌ 12 ಸಿಕ್ಸರ್‌ ಬಾರಿಸಿದ್ದು ದಾಖಲೆ.
– ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ ಇಬ್ಬರು ವಿದೇಶಿ ಕ್ರಿಕೆಟಿಗರನ್ನಷ್ಟೇ ಕಣಕ್ಕಿಳಿಸಿತು. ಇವರೆಂದರೆ ರೋವ¾ನ್‌ ಪೊವೆಲ್‌ ಮತ್ತು ಟಿಮ್‌ ಸೀಫ‌ರ್ಟ್‌. ಐಪಿಎಲ್‌ ಚರಿತ್ರೆಯಲ್ಲಿ ತಂಡವೊಂದು ಇಬ್ಬರೇ ವಿದೇಶಿ ಕ್ರಿಕೆಟಿಗರನ್ನು ಆಡಿಸಿದ ಕೇವಲ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು 2011ರ ಚೆನ್ನೈ ಎದುರಿನ ಪಂದ್ಯದಲ್ಲಿ ಕೆಕೆಆರ್‌ ಜಾಕ್‌ ಕ್ಯಾಲಿಸ್‌ ಮತ್ತು ಇಯಾನ್‌ ಮಾರ್ಗನ್‌ ಅವರನ್ನಷ್ಟೇ ಆಡಿಸಿತ್ತು.
– ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಆಡಲಾದ 12 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ 8ನೇ ಸಲ 175 ಪ್ಲಸ್‌ ರನ್‌ ಗಳಿಸಿತು.
– ಪೃಥ್ವಿ ಶಾ ಮುಂಬೈ ವಿರುದ್ಧ ಮತ್ತೆ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದರು. 9 ಇನ್ನಿಂಗ್ಸ್‌ಗಳಿಂದ ಗಳಿಸಿದ ಒಟ್ಟು ರನ್‌ ಕೇವಲ 104. ಸರ್ವಾಧಿಕ ಗಳಿಕೆ 38 ರನ್‌. ಸರಾಸರಿ 11.55.

Advertisement

Udayavani is now on Telegram. Click here to join our channel and stay updated with the latest news.

Next