Advertisement

ಮುಂಬಯಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ

08:26 PM Sep 04, 2020 | Suhan S |

ಮುಂಬಯಿ, ಸೆ. 3: ನಗರದಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸುವಂತೆ ಕೋರಿ ಮಹಾರಾಷ್ಟ್ರ ವಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್‌ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಬುಧವಾರ ಮತ್ತೂಂದು ಪತ್ರ ರವಾನಿಸದ್ದಾರೆ. ಮಾಜಿ

Advertisement

ಮುಖ್ಯಮಂತ್ರಿ ಕಳೆದ ಐದು ತಿಂಗಳುಗಳಲ್ಲಿ ಇಂತಹ 10ಕ್ಕೂ ಅಧಿಕ ಪತ್ರಗಳನ್ನು ಬರೆದಿದ್ದು, ಮಹಾನಗರದಲ್ಲಿ ಸೋಂಕಿನ ಹರಡುವಿಕೆಯ ನೈಜ ಚಿತ್ರಣವನ್ನು ಪಡೆಯಲು ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಅವರು ಮನವಿ ಮಾಡಿದ್ದಾರೆ. ಕಳೆದ ತಿಂಗಳಲ್ಲಿ ನಡೆಸಿದ ಪರೀಕ್ಷೆಗಳ ಸಂಖ್ಯೆಯನ್ನು ರಾಜ್ಯವು ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಆದರೆ ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳಿಗೆ ಹೋಲಿಸದರೆ ಸಾಕಾಗುದಿಲ್ಲ. ಜುಲೈನಲ್ಲಿ ನಗರದಲ್ಲಿ ಪ್ರತಿದಿನ 6,574 ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು, ಇದು ಆಗಸ್ಟ್‌ನಲ್ಲಿ ಪ್ರತಿದಿನ 7,709 ಪರೀಕ್ಷೆಗಳಿಗೆ ಏರಿತು. ಇದು ಕೇವಲ ಶೇ. 14ರಷ್ಟು ಹೆಚ್ಚಾಗಿದೆ.

ಇದರ ಪರಿಣಾಮವಾಗಿ ನಗರದಲ್ಲಿ ಈಗ ಕಡಿಮೆ ಪ್ರಕರಣಗಳು ದಾಖಲಾಗಿರುವುದನ್ನು ನಾವು ನೋಡುತ್ತೇವೆ. ಮಹಾರಾಷ್ಟ್ರದಲ್ಲಿ, ಪರೀಕ್ಷೆಗಳನ್ನು ಜುಲೈನಲ್ಲಿ ದಿನಕ್ಕೆ 37,528ರಿಂದ ಆಗಸ್ಟ್‌ದಲ್ಲಿ ದಿನಕ್ಕೆ 64,801ಕ್ಕೆ ಹೆಚ್ಚಿಸಲಾಗಿದೆ. ಇದು ಶೇ. 42ರಷ್ಟು ಹೆಚ್ಚಳವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಅಂಕಿಂಶ : ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಶೇ. 21ರಷ್ಟು ಮತ್ತು ಕೋವಿಡ್‌ ಸಾವು-ನೋವುಗಳಲ್ಲಿ ಶೇ. 38ರಷ್ಟು ರಾಜ್ಯವು ಕೊಡುಗೆ ನೀಡುತ್ತದೆ ಎಂದು ಫ‌ಡ್ನವೀಸ್‌ ಗಮನಸೆಳೆದರು. ಮಹಾರಾಷ್ಟ್ರದಲ್ಲಿ ಸರಾಸರಿ ಪ್ರಕರಣಗಳ ಪಾಸಿಟಿವ್‌ ದರವು ಶೇ. 18.44ರಷ್ಟಿದ್ದು. ಇದರಲ್ಲಿ ಮುಂಬಯಿ ಪಾಲು ಶೇ. 13.64ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇ. 8.57ಕ್ಕಿಂತ ಹೆಚ್ಚಾಗಿದೆ. ಇತ್ತೀಚೆಗೆ ಪಶ್ಚಿಮ ಮಹಾರಾಷ್ಟ್ರದ ಪ್ರವಾಸದಿಂದ ಮರಳಿದ ಫಡ್ನವೀಸ್‌ ಅವರು, ಸತಾರಾದಂತಹ ಜಿಲ್ಲೆಯಲ್ಲಿ ಸಾಕಷ್ಟು ಆಸ್ಪತ್ರೆ ಹಾಸಿಗೆಗಳ ಕೊರತೆ ಮತ್ತು ಮಹಾತ್ಮಾ ಫುಲೆಜನ ಆರೋಗ್ಯ ಯೋಜನೆಯ ಅನುಷ್ಠಾನ ಸೇರಿದಂತೆ ಈ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಪರಿಶೀಲಿಸುವಂತೆ ಠಾಕ್ರೆ ಅವರನ್ನು ಕೇಳಿಕೊಂಡರು.

ಈ ಮಧ್ಯೆ ಆರ್‌ಟಿ ಪಿಸಿಆರ್‌ ಪರೀಕ್ಷೆಗಳ ಜತೆಗೆ ಗಮನಾರ್ಹ ಸಂಖ್ಯೆಯ ಪ್ರತಿಜನಕ ಪರೀಕ್ಷೆಗಳನ್ನು ಸೇರಿಸುವ ಮೂಲಕ ನಾವು ಮುಂಬಯಿಯಲ್ಲಿ ನಮ್ಮ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ. ಆದರೂ ನಾವು ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿರುವುದರಿಂದ ಸಣ್ಣ ಸ್ಪೈಕ್‌ ಇರಬಹುದು. ನಾವು ಕಡಿಮೆ ಪ್ರಮಾಣದಲ್ಲಿ ಪರೀಕ್ಷಿಸುತ್ತಿರುವುದರಿಂದ ನಮ್ಮ ಸಂಖ್ಯೆಗಳು ಕಡಿಮೆಯಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next