Advertisement

9 ತಿಂಗಳಿಂದ ಅಪ್ರಾಪ್ತೆ ಮೇಲೆ 29 ಜನ ಕೀಚಕರಿಂದ ಸಾಮೂಹಿಕ ಅತ್ಯಾಚಾರ

06:37 PM Sep 23, 2021 | Team Udayavani |

ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. 15 ವರ್ಷದ ಹುಡುಗಿಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ 29 ಜನ ಕೀಚಕರು ಕಳೆದ 9 ತಿಂಗಳಿನಿಂದ ಸತತವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದೆ.

Advertisement

ಈ ವರ್ಷದ ಜನವರಿ ತಿಂಗಳಿನಲ್ಲಿ ಸಂತ್ರಸ್ತೆಯ ಬಾಯ್‍ಫ್ರೆಂಡ್ ಅತ್ಯಾಚಾರ ನಡೆಸಿದ್ದಾನೆ. ಈ ದೃಶ್ಯವನ್ನು ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ನಂತರ ಅತ್ಯಾಚಾರದ ವಿಡಿಯೋವನ್ನು ತನ್ನ ಸ್ನೇಹಿತರ ಜೊತೆ ಹಂಚಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ಈ ವಿಡಿಯೋ ಇಟ್ಟುಕೊಂಡು ಬೆದರಿಸಿ ಆಕೆಯ ಮೇಲೆ ಹೀನಕೃತ್ಯವೆಸಗುತ್ತಲೆ ಬಂದಿದ್ದಾರೆ.

ಜನವರಿಯಲ್ಲಿ ಅತ್ಯಾಚಾರ ನಡೆಸಿದ ಬಾಯ್‍ಫ್ರೆಂಡ್ ಆ ವಿಡಿಯೋ ತೋರಿಸಿ ಹೆದರಿಸಿ ಬೆದರಿಸಿ ಹಲವು ಬಾರಿ ಮತ್ತೆ ಅದೇ ಕೃತ್ಯ ನಡೆಸಿದ್ದಾನೆ. ಬಳಿಕ ತನ್ನ ಸ್ನೇಹಿತರಿಗೆ ವಿಡಿಯೋ ಹರಿಬಿಟ್ಟಿದ್ದಾನೆ. ಇದನ್ನು ಇಟ್ಟುಕೊಂಡು 9 ತಿಂಗಳಿನಲ್ಲಿ ನಾಲ್ಕರಿಂದ ಐದು ಸಾರಿ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ 29 ಜನರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ದತ್ತಾತ್ರೇಯ ಕರಾಲೆ ಮಾಹಿತಿ ನೀಡಿದ್ದಾರೆ.

ಕಳೆದ ರಾತ್ರಿ ( ಬುಧವಾರ) ಸಂತ್ರಸ್ಥೆಯ ದೂರಿನ ಆಧಾರದ ಮೇಲೆ 24 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಪ್ರಮುಖ ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡವರಾಗಿದ್ದಾರೆ ಎಂದು ಕರಾಲೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next