Advertisement

ಮುಂಬಯಿ-ಗೋವಾ ಅತ್ಯಾಧುನಿಕ ರೈಲು

10:08 AM May 01, 2017 | Team Udayavani |

ಹೊಸದಿಲ್ಲಿ: ಸುಧಾರಣೆಯ ಹೆಜ್ಜೆಗಳನ್ನಿಡುತ್ತಾ ಸಾಗುತ್ತಿರುವ ರೈಲ್ವೇಯು ಜೂನ್‌ನಿಂದ ಮುಂಬಯಿ-ಗೋವಾ ನಡುವೆ ಅತ್ಯಾಧುನಿಕ ಸೌಲಭ್ಯವುಳ್ಳ “ತೇಜಸ್‌ ಎಕ್ಸ್‌ ಪ್ರಸ್‌’ ರೈಲನ್ನು ಓಡಿಸಲಿದೆ.

Advertisement

ಹೊಸ ಮಾದರಿಯ ರೈಲಿನಲ್ಲಿ 20 ಬೋಗಿಗಳಿದ್ದು, ಪ್ರತಿ ಆಸನದಲ್ಲೂ  ಎಲ್‌ಸಿಡಿ ಪರದೆ ಇರಲಿದೆ. ಜತೆಗೆ ಉಚಿತ ವೈಫೈ, ಬೇಕಾದಾಗಲೆಲ್ಲ ಕಾಫಿ, ಟೀ ಕುಡಿಯಲು ಅನುಕೂಲವಾಗುವಂತೆ ಕಾಫಿ ವೆಂಡಿಂಗ್‌ ಮೆಷಿನ್‌, ತಿಂಡಿ ತಿನ್ನಲು ಟೇಬಲ್‌, ಜೈವಿಕ ಶೌಚಾಲಯ, ಸೆಲೆಬ್ರಿಟಿ ಶೆಫ್ ಸೌಲಭ್ಯ ಸಹಿತ ವಿಶ್ವದ ಅತ್ಯಾಧುನಿಕ ರೈಲುಗಳಲ್ಲಿ ಸಿಗುವ ಎಲ್ಲ ರೀತಿಯ ಸೌಲಭ್ಯಗಳೂ ಲಭ್ಯವಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಗೋವಾ ರೈಲಿ ನಲ್ಲಿ ಈ ಸೌಲಭ್ಯ ಅಳವಡಿಸಲಾಗಿದೆ. 

ಮುಂಗಾರು ಮಳೆಯ ವೇಳೆ ರೈಲು ಸಂಚಾರ ಆರಂಭವಾಗಲಿರುವುದರಿಂದ ಪ್ರಕೃತಿ ಸೌಂದರ್ಯ ಸವಿಯುತ್ತಾ ಪ್ರಯಾಣ ಮಾಡುವ ಸುವರ್ಣ ಅವಕಾಶವೂ ಒದಗಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next