Advertisement
ಮಂಗಳವಾರ ಬೆಳಗ್ಗೆ 11 ಗಂಟೆಗೆ ಭೋಪಾಲ್‍ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‍ಪ್ರೆಸ್ ಸೇರಿದಂತೆ ಇತರ ನಾಲ್ಕು ರೈಲುಗಳಿಗೆ ಮೋದಿ ಚಾಲನೆ ನೀಡಿದರು.
Related Articles
Advertisement
ವಂದೇ ಮಾತರಂ ವೇಳಾಪಟ್ಟಿ:ವಂದೇ ಭಾರತ್ ಎಕ್ಸ್‍ಪ್ರೆಸ್ ದೇಶದ ಅತ್ಯಂತ ವೇಗದ ರೈಲು ಮತ್ತು ಮಡಗಾಂವ್‍ನಿಂದ ಮುಂಬೈವರೆಗಿನ ದೂರವನ್ನು ಕೇವಲ ಏಳೂವರೆಯಿಂದ ಎಂಟು ಗಂಟೆಗಳಲ್ಲಿ ಕ್ರಮಿಸುತ್ತದೆ. ಆದರೆ, ಮಳೆಗಾಲದಲ್ಲಿ ವೇಗದ ಮಿತಿಯಿಂದಾಗಿ ರೈಲು ಈಗ 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 5.32 ಕ್ಕೆ ಮುಂಬೈಯಿಂದ ಹೊರಡುವ ಎಕ್ಸ್‍ಪ್ರೆಸ್ ಅದೇ ದಿನ ಮಧ್ಯಾಹ್ನ 3.30 ಕ್ಕೆ ಮಡಗಾಂವ್ ತಲುಪುತ್ತದೆ. ಮಡಗಾಂವ್‍ನಿಂದ ಹಿಂದಿರುಗುವ ಪ್ರಯಾಣವು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಮಧ್ಯಾಹ್ನ 12.20 ಕ್ಕೆ ಪ್ರಾರಂಭವಾಗಿ ರಾತ್ರಿ 10.20 ಕ್ಕೆ ಮುಂಬೈ ತಲುಪುತ್ತದೆ. ಇದನ್ನೂ ಓದಿ: Airport: ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿ ವ್ಯಕ್ತಿಗೆ ಲಕ್ಷಾಂತರ ರೂ. ಪಂಗನಾಮ !