ಮುಂಬಯಿ: ಗಂಗಡ ಗಾರ ನಾಯ್ಕ ಸಮಾಜ ಮುಂಬಯಿ ವತಿಯಿಂದ ಬಾಂದ್ರಾ ಪಶ್ಚಿಮದ ನ್ಯಾಷನಲ್ ಲೈಬ್ರೆರಿ ಸಭಾಗೃಹದಲ್ಲಿ ಜ. 20 ರಂದು ಅಂತಾರಾಷ್ಟ್ರೀಯ ತ್ರೋಬಾಲ್ ಪಂದ್ಯದಲ್ಲಿ ವಿಜೇತ ರಾದ ಜ್ಯೋತಿ ಅವರನ್ನು ಸಮ್ಮಾನಿಸಲಾಯಿತು.
ಇಂದಿರಾ ಕರುಣಾಕರ ಅವರು ಜ್ಯೋತಿ ಅವರನ್ನು ಶಾಲುಹೊದೆಸಿ, ಪುಷ್ಪಗುತ್ಛ, ಚಿನ್ನದ ಪದಕವನ್ನು ಪ್ರದಾನಿಸಿ ಸಮ್ಮಾನಿಸಿ, ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಭಾಗವಹಿಸಿ ವಿಜೇತರಾಗುವ ಭಾಗ್ಯವನ್ನು ಪರಮಾತ್ಮನು ಕರುಣಿಸುವಂತಾಗಲಿ ಎಂದು ಹರಸಿದರು. ಸಮಾಜದ ಅಧ್ಯಕ್ಷ ಕರುಣಾಕರ ನಾಯ್ಕ ಅವರು ಪ್ರಶಸ್ತಿಪತ್ರವನ್ನಿತ್ತು ಶುಭಹಾರೈಸಿದರು.
ಕಲ್ಯಾಣು³ರ ಮೂಲದ ರವೀಂದ್ರ ನಾಯ್ಕ ಅವರ ಪುತ್ರಿಯಾಗಿರುವ ಜ್ಯೋತಿ ಅವರು ಬೆಳಪು ಗ್ರಾಮದಲ್ಲಿ ನೆಲೆಸಿದ್ದಾರೆ. ಉಪಾಹಾರಗೃಹವನ್ನು ನಡೆಸುತ್ತಿರುವ ರವೀಂದ್ರ ನಾಯ್ಕರವರು ತನ್ನ ಮಗಳಿಗೆ ಯೋಗ್ಯ ಶಿಕ್ಷಣವನ್ನು ನೀಡುವುದರೊಂದಿಗೆ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಯೋಗ್ಯ ಅನುಕೂಲಗಳನ್ನೂ ಒದಗಿಸಿಕೊಟ್ಟಿರುವು ದರಿಂದ ಜ್ಯೋತಿ ಚಿಕ್ಕಂದಿನಿಂದಲೂ ಪಂದ್ಯಾ
ಟಗಳಲ್ಲಿ ಆಸಕ್ತಿ ತೋರಿಸುತ್ತಿದ್ದು, ಜಿಲ್ಲಾಮಟ್ಟದಲ್ಲೂ, ರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರದರ್ಶನವನ್ನು ನೀಡಿ, ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸಿ ವಿಜೇತರಾಗಿರುವುದು ನಮ್ಮೆಲ್ಲರಿಗೆ ಸಂತೋಷದ ವಿಚಾರವಾಗಿದೆ ಎಂದು ಅಧ್ಯಕ್ಷ ಕರುಣಾಕರ ನಾಯ್ಕರವರು ನುಡಿದರು.
ನೂರಾರು ಜನರು ಸೇರಿದಂತೆ ಸಭೆಯಲ್ಲಿ ಸಮಾಜದ ಆಡಳಿತ ಸಮಿತಿಯ ಸದಸ್ಯರುಗಳಾದ ಗಣೇಶ ನಾಯ್ಕ, ಗೋಪಿನಾಥ ನಾಯ್ಕ, ಗೋಪಾಲ ನಾಯ್ಕ, ಚಂದು ನಾಯ್ಕ, ಜಗದೀಶ ನಾಯ್ಕ, ನಿತ್ಯಾನಂದ ನಾಯ್ಕ, ಕೃಷ್ಣಗಿ ನಾಯ್ಕ, ವಿಟ್ಟಲ ನಾಯ್ಕ, ದಿನೇಶ ನಾಯ್ಕ, ಶಾಂತಾ, ಲತಾಕೃಷ್ಣ ಸಹಿತ ಇತರ ಗಣ್ಯರು ಉಪಸ್ಥಿತರಿದ್ದರು.