Advertisement

ಮುಂಬಯಿ ಗಣೇಶೋತ್ಸವಕ್ಕೆ ಸುಪ್ರೀಂ ಒಲವಿಲ್ಲ

01:33 AM Aug 22, 2020 | mahesh |

ಹೊಸದಿಲ್ಲಿ: ಮುಂಬಯಿ ಗಣೇಶೋತ್ಸವಕ್ಕೆ ಸೇರುವ ಜನರನ್ನು ನಿಯಂತ್ರಿಸುವುದೇ ಕಷ್ಟ. ಗಣೇಶೋತ್ಸವಕ್ಕೆ ಅನುಮತಿ ನೀಡಲು ನಮಗೆ ಒಲವಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ಮುಂಬಯಿಯ ಜೈನಮಂದಿರಗಳಲ್ಲಿ ಪರ್ಯುಷಣ ಆಚರಣೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಕೈಗೆತ್ತಿಕೊಂಡಿತ್ತು. ಈ ವೇಳೆ ಮುಖ್ಯ ನ್ಯಾ| ಎಸ್‌.ಎ. ಬೋಬ್ದೆ, ಮುಂಬಯಿ ಗಣೇಶೋತ್ಸವ ಬಗ್ಗೆ ನ್ಯಾಯಪೀಠದ ಅಭಿಪ್ರಾಯ ತಿಳಿಸಿದ್ದಾರೆ.

Advertisement

ಮುಂಬಯಿನ ದಾದರ್‌, ಬೈಕುಲಾ ಮತ್ತು ಚೆಂಬೂರ್‌ನ 3 ಜೈನ ಮಂದಿರಗಳಲ್ಲಿ ಪರ್ಯುಷಣ ಆಚರಿಸಲು ಸುಪ್ರೀಂ ಕೋರ್ಟ್‌ ಅನುಮತಿ ಕಲ್ಪಿಸಿದೆ. ಆಚರಣೆ ವೇಳೆ ಗರಿಷ್ಠ 5ಕ್ಕಿಂತ ಹೆಚ್ಚಿನ ಜನರು ಮಂದಿರದೊಳಗೆ ಇರಬಾರದು ಎಂದೂ ಷರತ್ತು ವಿಧಿಸಿದೆ.

ಮಹಾರಾಷ್ಟ್ರ ಆಕ್ಷೇಪ: ಒಂದು ಸಮುದಾಯದ ಹಬ್ಬದ ಆಚರಣೆಗೆ ಅನುಮತಿ ನೀಡಿದರೆ, ಬೇರೊಂದು ಸಮುದಾಯದವರೂ ಇದೇ ಬೇಡಿಕೆಯನ್ನೇ ಮುಂದಿಡಬಹುದು. ಆಗ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗ ಬಹುದು ಎಂದು ಮಹಾರಾಷ್ಟ್ರ ಸರಕಾರ ಪರ ಪಕೀಲ ಅಭಿಷೇಕ್‌ ಮನು ಸಿಂಘ್ವಿ ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next