ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಆಗಮನದ ಮೊದಲ ಹಂತದಲ್ಲಿಯೇ ಭಾರೀ ಪ್ರಮಾಣದಲ್ಲಿ ಅನಾಹುತವನ್ನೇ ಸೃಷ್ಟಿ ಮಾಡಿದೆ. ಮುಂಬಯಿ ವಿಮಾನ ನಿಲ್ದಾಣ, ಬೊರಿವಿಲಿ, ನವೀ ಮುಂಬಯಿ ಸೇರಿದಂತೆ ವಾಣಿಜ್ಯ ರಾಜಧಾನಿಯ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮುಂಬಯಿನ ಘಾಟ್ಕೊàಪರ್‌ನಲ್ಲಿ ಬೃಹತ್ ಪ್ರಮಾಣದ ಜಾಹೀರಾತು ಫಲಕ ಕುಸಿದು 8 ಮಂದಿ ಅಸುನೀಗಿದ್ದಾರೆ. ಮತ್ತೂಂದೆಡೆ ಬೃಹತ್ ಪ್ರಮಾಣದ ಟವರ್ ಗಾಳಿಯ ರಭಸಕ್ಕೆ ಪೆಟ್ರೋಲ್ ಬಂಕ್‌ನ ಮೇಲೆ ಬ್ದಿದಿದೆ. ಘಟನೆಯಲ್ಲಿ 59 ಮಂದಿ ಗಾಯಗೊಂಡಿದ್ದಾರೆ. ಜತೆಗೆ ಅದರ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ 100 ಮಂದಿಯ ಪೈಕಿ 67 ಮಂದಿಯನ್ನು ರಕ್ಷಿಸಲಾಗಿದೆ. ಛೆಡ್ಡಾನಗರ ಜಿಮ್‌ಖಾನಾ ಎಂಬಲ್ಲಿ ಅನಾಹುತ ಉಂಟಾಗಿದೆ. ರಕ್ಷಣ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ದಳದ ಸಿಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ.
ಬೃಹತ್ ಪ್ರಮಾಣದ ಕಬ್ಬಿಣದ ಟವರ್ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಕಾರುಗಳ ಮೇಲೆಯೂ ಬಿದ್ದಿದೆ. ಇದರಿಂದಾಗಿ ಕೆಲವು ವಾಹನಗಳು ನಜ್ಜುಗುಜ್ಜಾಗಿವೆ. ಘಟನೆಗೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿದ ಡಿಸಿಎಂ ದೇವೇಂದ್ರ ಫಡ್ನವೀಸ್ ಟವರ್ ಮುರಿದು ಬಿದ್ದ ಬಗ್ಗೆ ತನಿಖೆ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ಭಾರೀ ಮಳೆಯ ತೀವ್ರತೆಗೆ ವಾಣಿಜ್ಯ ನಗರಿ ನಲುಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಗಾಳಿ ಸಹಿತ ಮಳೆಯಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬಯಿ ಮೆಟ್ರೋದ ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರ ಜತೆಗೆ ಮುಂಬಯಿ ನಾಗರಿಕರ ಜೀವನಾಡಿಯಾಗಿರುವ ಸ್ಥಳೀಯ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು.
1 ಗಂಟೆ ಕಾಲ ವಿಮಾನ ಯಾನ ಸ್ಥಗಿತ: ಮುಂಬಯಿ ಏರ್‌ಪೋರ್ಟ್‌ನಲ್ಲಿ ಧೂಳು ಸಹಿತ ಬಿರುಗಾಳಿ ಬೀಸಿದ್ದರಿಂದ ಸೋಮವಾರ 1 ಗಂಟೆ ಕಾಲ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಒಟ್ಟು 15 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಜೆ 5.30ರ ಬಳಿಕ ವಿಮಾನ ಸಂಚಾರ ಸುಗಮವಾಗಿ ಪುನಾರಂಭವಾಯಿತು. ಕೆಲವು ದಿನಗಳ ಹಿಂದೆ ಹೊಸದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್) ಧಾರಾಕಾರ ಮಳೆಯಾಗಿತ್ತು. ಅಲ್ಲಿಯೂ ಕೂಡ ವ್ಯಾಪಕ ಹಾನಿ ಉಂಟಾಗಿತ್ತು.
ಮೊದಲ ಮಳೆಗೆ ಏನಾಯಿತು?
ಮುಂಬಯಿ ಏರ್‌ಪೋರ್ಟ್‌ನಲ್ಲಿ ಧೂಳು ಸಹಿತ ಬಿರುಗಾಳಿ
ಜತೆಗೇ ಗಾಳಿ ಸಹಿತ ಭಾರೀ ಮಳೆ
ಮುಂಬಯಿ ಏರ್‌ಪೋರ್ಟ್‌ನಲ್ಲಿ 15 ವಿಮಾನಗಳ ಸಂಚಾರ ತಾತ್ಕಾಲಿಕ ರದ್ದು
ಮುಂಬಯಿ ಮೆಟ್ರೋ ರೈಲು, ಉಪನಗರಗಳ ರೈಲು ಸಂಚಾರದಲ್ಲಿ ವ್ಯತ್ಯಯ
ಗುಜರಾತ್‌ನ ಹಲವೆಡೆ ಅಕಾಲಿಕ ಮಳೆ: ಮೊಬೈಲ್ ಟವರ್ ಧರೆಗೆ
ಅಹ್ಮದಾಬಾದ್: ಮಹಾರಾಷ್ಟ್ರದ ಮುಂಬಯಿ ಮಾತ್ರವಲ್ಲದೆ, ಗುಜರಾತ್‌ನ ಹಲವು ಭಾಗಗಳಲ್ಲೂ ಭಾರೀ ಮಳೆ ಉಂಟಾ ಗಿದೆ. ಮುಂದಿನ 3 ದಿನಗಳ ಕಾಲ ಮಳೆ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರೀ ಮಳೆ ಯಿಂದಾಗಿ ಗಾಂಧಿನಗರದಲ್ಲಿ ಮೊಬೈಲ್ ಟವರ್‌ವೊಂದು ನೆಲ ಕಪ್ಪಳಿಸಿದೆ. ಅಮ್ರೇಲಿ, ಬನಾಸಕಾಂಠಾ ಸೇರಿ ಹಲವು ಪ್ರದೇಶ ಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಬಿರುಗಾಳಿಯಿಂದ ವಾಡಿಯಾದಲ್ಲಿ ಪೊಲೀಸ್ ಚೆಕ್‌ಪೊಸ್ಟ್ ನೆಲಕ್ಕುರುಳಿದೆ.