Advertisement

Mumbai: ಆರ್‌ಬಿಐ ಕಚೇರಿಗೆ ಹುಸಿ ಬಾಂಬ್‌ ಬೆದರಿಕೆ ಸಂದೇಶ

12:24 AM Dec 14, 2024 | Team Udayavani |

ಮುಂಬಯಿ: ದಕ್ಷಿಣ ಮುಂಬಯಿಯ ಆರ್‌ಬಿಐ ಕಟ್ಟಡಕ್ಕೆ ಬಾಂಬ್‌ ಬೆದರಿಕೆ ಎದುರಾಗಿದೆ. ಗವರ್ನರ್‌ ಅಧಿಕೃತ ಇಮೇಲ್‌ ಖಾತೆಗೆ ಗುರುವಾರ ರಷ್ಯ­ನ್‌ ಭಾಷೆಯಲ್ಲಿ ಸಂದೇಶ ಕಳುಹಿಸ­ಲಾ­ಗಿದೆ. “ಕಟ್ಟಡದಲ್ಲಿ ಸುಧಾರಿತ ಸ್ಫೋಟಕ ಇರಿಸಲಾಗಿದ್ದು, 5 ದಿನಗಳಲ್ಲಿ ಅದನ್ನು ಸ್ಫೋಟಿಸುತ್ತೇವೆ’ ಎಂದು ಬೆದರಿಕೆ ಒಡ್ಡಲಾ­ಗಿದೆ. ಉಕ್ರೇನ್‌ನ ಸಂಘಟನೆ ಬ್ರದರ್‌ಹುಡ್‌ ಮೂವ್‌ಮೆಂಟ್‌ ಫಾರ್‌ ಉಕ್ರೇನ್‌ಗೆ ಬೆಂಬಲ ನೀಡುವಂತೆ ಆರ್‌ಬಿಐ ಗವ­ರ್ನ­ರ್‌ಗೆ ಆಗ್ರಹಿಸಲಾಗಿದೆ. ಇದು 1 ತಿಂಗಳ ಅವಧಿಯಲ್ಲಿ ಆರ್‌ಬಿಐಗೆ ಬಂದ 2ನೇ ಬೆದರಿಕೆ ಸಂದೇಶವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next