Advertisement

ವಿಮಾನ ಹೈಜಾಕ್‌ ಬೆದರಿಕೆ!:ಮುಂಬೈ, ಚೆನ್ನೈ ನಿಲ್ದಾಣಗಳಲ್ಲಿ ಹೈ ಅಲರ್ಟ್

12:30 PM Apr 16, 2017 | Team Udayavani |

ಮುಂಬಯಿ: ವಿಮಾನವೊಂದನ್ನು ಹೈ ಜಾಕ್‌ ಮಾಡುವುದಾಗಿ ಮಹಿಳೆಯೊಬ್ಬಳು ಮುಂಬಯಿ ಪೊಲೀಸರಿಗೆ ಇ ಮೇಲ್‌ ಮಾಡಿದ ಬಳಿಕ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

Advertisement

ಮುಂಬಯಿ ಪೊಲೀಸರು ಇ ಮೇಲನ್ನು ಭದ್ರತಾ ಮತ್ತು ಗುಪ್ತಚರ ಇಲಾಖೆಗಳಿಗೆ ರವಾನಿಸಿದ್ದಾರೆ. ಸಂದೇಶ ಎಲ್ಲಿಂದ ಬಂದಿದೆ ಮತ್ತು ಯಾರ ಸಂಪರ್ಕದಲ್ಲಿ ಬಂದಿದೆ ಎನ್ನುವ ಜಾಡು ಪತ್ತೆ ಹಚ್ಚುತ್ತಿದ್ದಾರೆ. 

ಚೆನ್ನೈ,ಮುಂಬಯಿ ,ಹೈದಾರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಸಿಐಎಸ್‌ಎಫ್ ಹದ್ದಿನ ಕಣ್ಣು ಇರಿಸಿದ್ದು, ವ್ಯಾಪಕ ತಪಾಸಣೆಯನ್ನೂ ನಡೆಸಲಾಗುತ್ತಿದೆ. 

ಯಾರೂ ಹೆದರುವ ಅಗತ್ಯವಿಲ್ಲ, ಭದ್ರತಾ ಪರಿಶೀಲನೆ ಎಂದಿನಂತೆ ನಡೆಯಲಿದೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪ್ರಯಾಣಿಕರಿಗೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next