ಮುಂಬೈ: ಪೈಲಟ್ ವೃತ್ತಿಯಲ್ಲಿದ್ದ ಪತ್ನಿಯನ್ನು ತೊರೆದಿರುವ ಉದ್ಯಮಿಗೆ ಇಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಪ್ರತಿ ತಿಂಗಳು 1.5 ಲಕ್ಷ ರೂ. ನಿರ್ವಹಣಾ ವೆಚ್ಚ ನೀಡಲು ಸೂಚಿಸಿದೆ.
ಪತಿ ದೈಹಿಕ ಕಿರುಕುಳ ನೀಡಿದ್ದರಿಂದಾಗಿ ಅನಾರೋಗ್ಯಕ್ಕೆ ಈಡಾಗಿರುವ ಪತ್ನಿ ಉದ್ಯೋಗನಷ್ಟ ಅನುಭವಿಸುತ್ತಿದ್ದು, ಗಂಡನಿಂದ ಸೂಕ್ತ ಪರಿಹಾರ ಕೋರಿ ಕೋರ್ಟ್‌ನ ಮೆಟ್ಟಿಲೇರಿದ್ದಳು.
“ನನ್ನ ಗಂಡ ವಾರ್ಷಿಕವಾಗಿ 18 ಕೋಟಿ ರೂ. ಆದಾಯ ಹೊಂದಿದ್ದಾನೆ. ಕೆಲಸ ಕಳೆದುಕೊಂಡಿರುವ ನಾನು ಅಪ್ಪನ ಆಸರೆಯಲ್ಲಿದ್ದೇನೆ’ ಎಂದು ಪತ್ನಿ ನ್ಯಾಯಪೀಠದ ಮುಂದೆ ಅಳಲು ತೋಡಿಕೊಂಡಿದ್ದಳು.
“ಪತ್ನಿಯನ್ನು ಸಾಕುವುದು ಪತಿಯ ಕರ್ತವ್ಯ. ಆಕೆಯ ನಿತ್ಯದ ಪ್ರತಿಯೊಂದು ಅವಶ್ಯಕತೆಗಳನ್ನೂ ಪತಿಯೇ ಭರಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ. ಇದರನ್ವಯ, ಪತ್ನಿ ಸಲ್ಲಿಸಿದ್ದ ಅರ್ಜಿಯ ದಿನಾಂಕದಿಂದ ಇಲ್ಲಿಯವರೆಗೆ ಪತಿ ಒಟ್ಟು 42 ಲಕ್ಷ ರೂ. ಪರಿಹಾರ ನೀಡಬೇಕಾಗಿ ಬಂದಿದೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಶೇ. 60ರಷ್ಟು ಹೊಟೇಲ್‌ಗಳು ಪುನರಾರಂಭ: ಸಿಬ್ಬಂದಿ ಕೊರತೆ ಸವಾಲು