Advertisement

Atal Setu; ಜಿಗಿದು ಆತ್ಮಹ*ತ್ಯೆ: 3 ದಿನದ‌ಲ್ಲಿ 2ನೇ ಘಟನೆ

01:52 AM Oct 04, 2024 | Team Udayavani |

ಮುಂಬಯಿ: ಮುಂಬಯಿ- ನವೀ ಮುಂಬಯಿ ಸಂಪರ್ಕಿ ಸುವ ಅಟಲ್‌ ಸೇತುವಿನಿಂದ ಜಿಗಿದು 52 ವರ್ಷದ ಉದ್ಯಮಿ ಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3 ದಿನಗಳಲ್ಲಿ ಅಟಲ್‌ ಸೇತುವಿನಲ್ಲಿ ನಡೆದ 2ನೇ ಆತ್ಮಹತ್ಯೆ ಪ್ರಕರಣವಾಗಿದೆ. ಕಾರಿನಲ್ಲಿ ಸೇತುವೆಯ ಮೇಲೆ ಆಗಮಿಸಿದ್ದ ಉದ್ಯಮಿ ಕಾರನ್ನು ನಿಲ್ಲಿಸಿ ಸಮುದ್ರಕ್ಕೆ ಜಿಗಿದಿದ್ದಾರೆ. ಈ ಸಂದರ್ಭದಲ್ಲಿ ಸಿಸಿಟಿವಿ ವೀಕ್ಷಣೆಯಲ್ಲಿದ್ದ ಸಿಬಂದಿ ಸೂಚನೆ ಹಿನ್ನೆಲೆಯಲ್ಲಿ ಸುಮುದ್ರದಲ್ಲಿ ಇಳಿದು ಕಾರ್ಯಾಚರಣೆ ನಡೆಸಿ ಉದ್ಯಮಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಅಸುನೀಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next