ಪುಣೆ: ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಕಾಂಗ್ರೆಸ್ ಆಡಳಿತವು ಮುಖ್ಯವಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಲ್ಲದೆ ಹಿಂದೂ ಕಾರ್ಯಕರ್ತರ ಮಾರಣ ಹೋಮವನ್ನು ನಡೆಸುತ್ತಿದೆ. ಅಲ್ಲದೆ ಹಿಂದೂ ಸಂಸ್ಕೃತಿಯ ಆಚರಣೆಗಳ ವಿರುದ್ಧ ಲಗಾಮು ಹೇರಲು ಪ್ರಯತ್ನಿಸುತ್ತಿದ್ದು ಇದೀಗ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯುವ ಅವಕಾಶ ಬಂದೊದಗಿದೆ. ಈ ನಿಟ್ಟಿನಲ್ಲಿ ಮುಂಬಯಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ನಿವಾಸಿಗರು ಕೂಡ ತಮ್ಮ ಊರಿನ ಜನತೆಯ ಜತೆ ಕೈಜೋಡಿಸುವ ಅಗತ್ಯವಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಹೇಳಿದರು. ಅವರು ಉಪನಗರ ಅಂಧೇರಿ ಪೂರ್ವದ ಸಾಕಿನಾಕ ಗ್ರಾÂಂಡ್ ಪೆನಿನ್ಸುಲಾ ಹೊಟೇಲ್‌ನಲ್ಲಿ ಮುಂಬಯಿ ಬಿಜೆಪಿ ಅಭಿಮಾನಿಗಳು ಆಯೋಜಿಸಿದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಸಂಪೂರ್ಣ ಹಿನ್ನಡೆಯಾಗಿದ್ದು ಅದು ಮರಳಿ ಪಥವನ್ನು ಹಿಡಿಯಬೇಕಾದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಆವಶ್ಯಕವಾಗಿದೆ. ಹಾಗೆಯೇ ಕಾಂಗ್ರೆಸ್ ಸರಕಾರ ಜಾತಿ ಸಮುದಾಯಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಒಡೆದು ಆಳುವ ನೀತಿಯ ವಿರುದ್ಧ ತಕ್ಕ ಪಾಠ ಕಲಿಸಬೇಕಾಗಿದೆ. ಇದಕ್ಕಾಗಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆರಿಸಲು ಮುಂಬಯಿ ಕನ್ನಡಿಗರು ಶ್ರಮಿಸಬೇಕಾಗಿದೆ ಎಂದು ಹೇಳಿದರು.
ಸಂಸದ ಗೋಪಾಲ್ ಶೆಟ್ಟಿ, ಜಾಗತಿಕ ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಥಾಣೆ ಬಿಜೆಪಿ ಅಧ್ಯಕ್ಷ ಭಿವಂಡಿ ಸಂತೋಷ್ ಶೆಟ್ಟಿ, ತವಾ ಸೂಟ್‌ನ ರಿತೇಶ್ ಶೆಟ್ಟಿ ಮತ್ತು ಪರ್ವತ್ ಶೆಟ್ಟಿ, ಮುಲುಂಡ್ ಬಿಲ್ಲವರ ಸಂಘದ ಆನಂದ್ ಜತ್ತನ್, ಮುಂಬಯಿ ಬಿಜೆಪಿ ಸೌತ್ ಇಂಡಿಯನ್ ಸೆಲ್‌ನ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬಿಬಿಎನ್ ಸಾಮಾಜಿಕ ವಿಕಾಸ್ ಗ್ರೂಪ್ ಇದರ ಥಾಣೆ ಜಿÇÉಾಧ್ಯಕ್ಷ ಪ್ರವೀಣ್ ಶೆಟ್ಟಿ, ಪಾಡ್ಗ ಥಾಣೆ ಜಿಲ್ಲೆಯ ಯುವ ಬಿಲ್ಲವ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಮುಖಂಡ ಉತ್ತಮ ಶೆಟ್ಟಿಗಾರ್, ಹಿರಿಯ ಬಿಲ್ಲವ ಮುಂದಾಳು ಪಿ. ವಿ. ಭಾಸ್ಕರ್, ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್, ನಗರಸಭಾ ಸದಸ್ಯರಾದ ದಿನಕರ ಶೆಟ್ಟಿ ಹೆರ್ಗ, ಮಹೇಶ್ ಠಾಕೂರ್, ಕಪ್ಪೆಟ್ಟು ಪ್ರವೀಣ್ ಕುಮಾರ್ ಶೆಟ್ಟಿ, ಬೆಳ್ವೆ ವಸಂತ್ ಕುಮಾರ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ರಂಜಿತ್ ಶೆಟ್ಟಿ, ದೇವಿಚರಣ್ ಕಾವಾ ಮತ್ತು ದಿಲೀಪ್ ರಾಜು ಹೆಗ್ಡೆ ಇವರು ಸಂಯೋಜಿಸಿದ್ದರು. ಅಕ್ಷತಾ ತೆಂಡೂಲ್ಕರ್ ಮತ್ತು ಗೀತಾ ವಸಂತ ನಾಯಕ್ ಕಾರ್ಯಕ್ರಮ ನಿರೂಪಿಸಿದರು.