Advertisement

ಮುಂಬಯಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸೇತುವೆ; ಚಾಂದಿನಿ ಚೌಕ್‌ ಸೇತುವೆ ನೆಲಸಮ

12:32 AM Oct 03, 2022 | Team Udayavani |

ಮುಂಬೈ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಅವಳಿ ಕಟ್ಟಡವನ್ನು ನೆಲಸಮಗೊಳಿಸಿದ ಬೆನ್ನಲ್ಲೇ, ಮಹಾರಾಷ್ಟ್ರದ ಪುಣೆಯ ಚಾಂದಿನಿ ಚೌಕ್‌ನಲ್ಲಿದ್ದ ಹಳೆಯ ಸೇತುವೆಯನ್ನು ಶನಿವಾರ ಮಧ್ಯರಾತ್ರಿ ನೆಲಸಮ ಮಾಡಲಾಗಿದೆ. ಸೇತುವೆಯನ್ನು ಮುಂಬೈ-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್‌4ನಲ್ಲಿ 90ರ ದಶಕದಲ್ಲಿ ನಿರ್ಮಿಸಲಾಗಿತ್ತು.

Advertisement

600ಕೆ.ಜಿ ಸ್ಫೋಟಕವನ್ನು ಬಳಸಿಕೊಂಡು ಶನಿವಾರ ರಾತ್ರಿ 1 ಗಂಟೆಯ ಸಮಯಕ್ಕೆ ಸೇತುವೆಯನ್ನು ನೆಲಸಮಗೊಳಿಸಲಾಗಿದೆ. ಸೇತುವೆಯ ಪಳೆಯುಳಿಕೆಗಳನ್ನೆಲ್ಲ ಸ್ಥಳಾಂತರ ಮಾಡಿದ ನಂತರ ಭಾನುವಾರ ಬೆಳಗ್ಗೆ 10 ಗಂಟೆಯ ಸಮಯಕ್ಕೆ ಹೆದ್ದಾರಿಯಲ್ಲಿ ಮತ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಅವಳಿ ಕಟ್ಟಡವನ್ನು ನೆಲಸಮ ಮಾಡಿದ್ದ ಎಡಿಫೈಸ್‌ ಸಂಸ್ಥೆಯೇ ಈ ಸೇತುವೆಯನ್ನೂ ವ್ಯವಸ್ಥಿತವಾಗಿ ಕೆಡವಿದೆ.

ಸೇತುವೆ ಹಳೆಯದ್ದಾಗಿದ್ದರಿಂದಾಗಿ ಅದರ ಮೇಲೆ ವಾಹನ ಓಡಾಟ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಸೇತುವೆಯ ಕೆಳಭಾಗದಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next