Advertisement

ಮುಂಬಯಿ ವಿಮಾನ ನಿಲ್ದಾಣ : ಇಂದು 6 ಗಂಟೆ ವಿಮಾನ ಸೇವೆ ಬಂದ್‌

12:09 AM May 10, 2022 | Team Udayavani |

ಮುಂಬಯಿ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಳೆಗಾಲದ ಪೂರ್ವ ನಿರ್ವಹಣೆ ಮತ್ತು ದುರಸ್ತಿಗಾಗಿ ಮಂಗಳವಾರ ಆರು ಗಂಟೆಗಳ ಕಾಲ ಎಲ್ಲ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಿದೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಎರಡು ರನ್‌ವೇಗಳಾದ 14/32 ಮತ್ತು 09/27 ಮೇ 10ರಂದು ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಎಲ್ಲ ವಿಮಾನ ಸೇವೆಗಳಿಗೆ ಮುಚ್ಚಿರುತ್ತವೆ. ನಿರ್ವಹಣ ಕಾರ್ಯಗಳು ಪೂರ್ಣಗೊಂಡ ಅನಂತರ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next