Advertisement

ಲೈಂಗಿಕ ಕಿರುಕುಳಕ್ಕೆ ಬೇಸತ್ತು ಮಲ ಮಗನನ್ನು ಕೊಲ್ಲಿಸಿದ ತಾಯಿ

04:16 PM Sep 19, 2017 | udayavani editorial |

ಮುಂಬಯಿ : ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಲ ಮಗನನ್ನು 50,000 ರೂ. ಸುಪಾರಿ ಕೊಟ್ಟು ಕೊಲ್ಲಿಸಿದ ಆರೋಪದ ಮೇಲೆ 55 ವರ್ಷ ಪ್ರಾಯದ ಮಹಿಳೆಯನ್ನು  ಮುಂಬಯಿಯ ಭಯಾಂದರ್‌ ಪಶ್ಚಿಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ವರದಿಗಳ ಪ್ರಕಾರ ಮಹಿಳೆಯ  ಮಗ ರಾಮಚರಣ್‌ ಎಂಬಾತನು ಮಾದಕ ದ್ರವ್ಯ ವ್ಯಸನಿಯಾಗಿದ್ದು ಕಳೆದ ಆರು ತಿಂಗಳಿಂದ ತನ್ನ ಮಲ ತಾಯಿ ರಜನಿ ಎಂಬಾಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ರಜನಿ,ರಾಮಚರಣ್‌ನನ್ನು ಕೊಲ್ಲುವಂತೆ ಹಿರಿಯ ಪುತ್ರ ಸೀತಾರಾಮನನ್ನು ಕೇಳಿಕೊಂಡಳು. 

ಟೈಮ್ಸ್‌ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ ಕಳೆದ ಆಗಸ್ಟ್‌ 21ರಂದು ಪೊಲೀಸರಿಗೆ ಕುತ್ತಿಗೆಯಲ್ಲಿ ಇರಿತದ ಗಾಯಗಳಿದ್ದ ರಾಮಚರಣನ ಶವ ಪತ್ತೆಯಾಯಿತು. ತನಿಖೆ ಆರಂಭಿಸಿದ ಪೊಲೀಸರಿಗೆ ಆತನ ಶವದ ಕೈಯಲ್ಲಿ “ರಾಮಚರಣ್‌’ ಮತ್ತು “ರಜನಿ’ ಎಂದು ಟಟ್ಟೂ ಮಾಡಲ್ಪಟ್ಟ ಬರಹಗಳು ಕಂಡು ಬಂದವು. 

ಇದನ್ನು ಅನುಸರಿಸಿ ಪೊಲೀಸರು ನವೀ ಮುಂಬಯಿ, ಮುಂಬಯಿ, ಥಾಣೆ, ಪಾಲಗಢ ಜಿಲ್ಲೆಯ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಮೃತ ರಾಮಚರಣನ ಫೋಟೋಗಳನ್ನು ಬಿಡುಗಡೆ ಮಾಡಿದರು. 

ಸೆ.14ರಂದು ಭಯಾಂದರ್‌ ಪೊಲೀಸ್‌ ಠಾಣಗೆ ಭೇಟಿಕೊಟ್ಟ ಸುನೀತಾ ಶರ್ಮಾ ಎಂಬಾಕೆ ಫೋಟೋ ಕಂಡು ರಾಮಚರಣ್‌ ನನ್ನು ಗುರುತಿಸಿದಳು. ಪರಿಣಾಮವಾಗಿ ಪೊಲೀಸರು ರಜನಿಯ ಮನೆಗೆ ತೆರಳಿ ಆಕೆಯನ್ನು ಪ್ರಶ್ನಿಸಿದರು.

Advertisement

ಆರಂಭದಲ್ಲಿ ಆಕೆ  “ಆ.19ರಂದು ಮನೆ ಬಿಟ್ಟು ಹೋಗಿದ್ದ ರಾಮಚರಣ್‌ ಬಗ್ಗೆ ನಮಗೆ ಈ ತನಕ ಯಾವುದೇ ಮಾಹಿತಿ ಇಲ್ಲ’ ಎಂದು ಹೇಳಿದಳು. ಆದರೆ ಪೊಲೀಸರು ತೀವ್ರವಾಗಿ ಪ್ರಶ್ನಿಸಿದಾಗ ಆಕೆ, ಲೈಂಗಿಕ ಕಿರುಕುಳದಿಂದ ಬೇಸತ್ತು,  ರಾಮಚರಣ್‌ನನ್ನು ಕೊಲ್ಲಿಸಿದ್ದು ತಾನೇ ಎಂದು ಒಪ್ಪಿಕೊಂಡಳು.

ರಾಮಚರಣ್‌ ಕೊಲೆ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ರಜನಿ, ಆಕೆಯ ಪುತ್ರ ಸೀತಾರಾಮ ಮತ್ತು ಕೊಲೆಗೆ ನೆರವಾದ ಆತನ ಇಬ್ಬರು ಸ್ನೇಹಿತರಾದ ರಾಕೇಶ್‌ ಯಾದವ್‌ ಮತ್ತು ಕೇಶವ್‌ ಯಾದವ್‌ ಅವರನ್ನು ಬಂಧಿಸಿದ್ದು ಸೆ.23ರ ತನಕ ಇವರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next