Advertisement

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

02:06 AM Jul 27, 2024 | Team Udayavani |

ಮುಂಬಯಿ: ತನ್ನ 22 ಶತ್ರುಗಳ ಹೆಸರನ್ನು ತನ್ನ ತೊಡೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ರೌಡಿಶೀಟರ್‌ವೊಬ್ಬ ಮುಂಬಯಿಯ ವರ್ಲಿಯಲ್ಲಿ ಕೊಲೆಯಾಗಿದ್ದಾನೆ.

Advertisement

ತನ್ನನ್ನು ಕೊಲೆ ಮಾಡಬಹುದೆಂಬ ಶಂಕೆಯಿಂದ ತನ್ನ 22 ಶತ್ರುಗಳ ಹೆಸರನ್ನು ಈತ ಟ್ಯಾಟೂ ಹಾಕಿಸಿಕೊಂಡಿದ್ದು, ಇದನ್ನು ಆಧರಿಸಿ ಮುಂಬಯಿ ಪೊಲೀಸರು ಮೂವ ರನ್ನು ಬಂಧಿಸಿದ್ದಾರೆ. ಸ್ಪಾವೊಂದರಲ್ಲಿ ಬುಧವಾರ ಗುರು ವಾಘಮರೆ(48)ಯನ್ನು ಕೊಲ್ಲಲಾಗಿದೆ. ಕೊಲೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ರಾಜಸ್ಥಾನ ಮತ್ತು ಮುಂಬಯಿ ಯಲ್ಲಿ 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಪಾ ಮಾಲಕ ಸಂತೋಷ್‌ ಶೇರೇಕರ್‌ ಕೂಡ ಬಂಧಿತನಾಗಿದ್ದು, 22 ಮಂದಿಯ ಹೆಸರಲ್ಲಿ ಈತನ ಹೆಸರೂ ಇತ್ತು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next