Advertisement

ಎಸ್ಪಿ ಜತೆಗಿನ ಮೈತ್ರಿಯೇ ಮುಳುವಾಯ್ತು: ಎಚ್‌.ವಿಶ್ವನಾಥ್‌

03:45 AM Mar 12, 2017 | Team Udayavani |

ಬೆಂಗಳೂರು:ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ.

Advertisement

ಪಂಚ ರಾಜ್ಯಗಳ ಚುನಾವಣೆ ಫ‌ಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ಉತ್ತರಪ್ರದೇಶದಲ್ಲಿ ಪ್ರಿಯಾಂಕ ಗಾಂಧಿ ನೇತೃತ್ವದಲ್ಲಿ ಕನಿಷ್ಠ 100 ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನಹರಿಸಿದ್ದರೆ ನಾವು ಹೆಚ್ಚು ಸೀಟು ಗೆಲ್ಲುತ್ತಿದ್ದೆವು. ಶೀಲಾಧೀಕ್ಷಿತ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲಿಗೆ ಬಿಂಬಿಸಿದ್ದು, ಸಮಾಜವಾದಿ ಪಕ್ಷದ ಆಡಳಿತ ವಿರೋಧಿ ಅಲೆ, ದಲಿತರ ಮೇಲೆ ಅವರ ಆಡಳಿತದಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು ಕಾಂಗ್ರೆಸ್‌ಗೆ ಮುಳುವಾಯಿತು ಎಂದು ಹೇಳಿದರು.

ಪಂಜಾಬ್‌, ಮಣಿಪುರ, ಗೋವಾದಲ್ಲಿ ಕಾಂಗ್ರೆಸ್‌ ಸಾಧನೆ ಉತ್ತಮವಾಗಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ನೆಲೆ ಇದೆ ಎಂಬುದು ಇದರಿಂದ ಸಾಬೀತಾಗಿದೆ.  ಒಟ್ಟಾರೆ ಚುನಾವಣೆ ಫ‌ಲಿತಾಂಶ ಪಾಠ ಎಂದು ತಿಳಿದು, ರಾಜ್ಯದಲ್ಲೂ ತಳಮಟ್ಟದಿಂದ ಪಕ್ಷ ಬಲವರ್ಧನೆಗೆ ಮುಂದಾಗಬೇಕಿದೆ ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ವಿಷಯಾಧಾರಿತ ಚುನಾವಣೆ ನಡೆಯುತ್ತಿಲ್ಲ. ನಾಯಕತ್ವದ ಮೇಲೆ ನಂಬಿಕೆ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ, ಅದೇ ಅಲೆ ಸೃಷ್ಟಿಸಿ ಸರ್ಕಾರ ರಚನೆ ಮಾಡುವಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next