Advertisement

Road Mishap ಮೂಳೂರು: ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಗಂಭೀರ

11:24 PM Aug 19, 2024 | Team Udayavani |

ಕಾಪು: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ಆಸಿಫ್‌ ಸಾಬ್‌ ಅವರು ಗಂಭೀರ ಗಾಯಗೊಂಡ ಘಟನೆ ಮೂಳೂರು ಸುನ್ನಿ ಸೆಂಟರ್‌ ಬಳಿ ಆ. 18ರಂದು ಸಂಭವಿಸಿದೆ.

Advertisement

ಮೂಳೂರು ಸುನ್ನಿ ಸೆಂಟರ್‌ ಎದುರಿನ ರಾ.ಹೆ. 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರನ್ನು ಫಾರುಕ್‌ ದಿನಾರ್‌ ಎಂಬಾತ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಅದೇ ರಸ್ತೆಯ ಡಿವೈಡರ್‌ ಬದಿಯಲ್ಲಿ ತೆರಳುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದಾನೆ.

ಪರಿಣಾಮವಾಗಿ ರಸ್ತೆಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸ್ಕೂಟರ್‌ ಸವಾರನನ್ನು ಸ್ಥಳೀಯರು ಢಿಕ್ಕಿ ಹೊಡೆದ ಕಾರಿನಲ್ಲಿಯೇ ಕೊಂಡೊಯ್ದು ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next