Advertisement

Puttur: ಅಂಗಡಿಗೆ ನುಗ್ಗಿದ ಕಾರು; ಚಾಲಕ ಅಸ್ವಸ್ಥ

09:12 PM Sep 12, 2024 | Team Udayavani |

ಪುತ್ತೂರು: ನಗರದ ಕಿಲ್ಲೆ ಮೈದಾನದ ಬಳಿ ಚಾಲಕ ಅಸ್ವಸ್ಥಗೊಂಡ ಪರಿಣಾಮ ಕಾರು ಹಿಮ್ಮುಖವಾಗಿ ಚಲಿಸಿ ಅಂಗಡಿಗಳಿಗೆ ನುಗ್ಗಿದ್ದು, ವ್ಯಕ್ತಿ ಮತ್ತು ಮಹಿಳೆಯೊಬ್ಬರು ಗಾಯಗೊಂಡ ಘಟನೆ ಗುರುವಾರ (ಸೆ. 12) ಮಧ್ಯಾಹ್ನ ನಡೆದಿದೆ.

Advertisement

ಕಿಲ್ಲೆ ಮೈದಾನದ ಒಳಗೆ ನಿಲ್ಲಿಸಲಾಗಿದ್ದ ಕಾರನ್ನು ಹೊರ ತೆಗೆಯುವ ಸಂದರ್ಭ ಚಾಲಕ ಅಸ್ವಸ್ಥಗೊಂಡಿದ್ದು, ಪರಿಣಾಮ ಕಾರು ಹಿಮ್ಮುಖವಾಗಿ ಚಲಿಸಿ ಪಕ್ಕದಲ್ಲಿದ್ದ ಅಂಗಡಿಗೆ ಢಿಕ್ಕಿ ಹೊಡೆದಿದೆ. ಅಂಗಡಿಯಲ್ಲಿದ್ದ ರಮೇಶ್‌ ಮತ್ತು ಮಹಿಳೆಯೊಬ್ಬರಿಗೆ ಗಾಯವಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next