Advertisement

Road Mishap ಮೂಳೂರಿನಲ್ಲಿ ಸರಣಿ ಅಪಘಾತ: ಮೂರು ಕಾರು ಜಖಂ

12:11 AM Sep 09, 2024 | Team Udayavani |

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ರವಿವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮೂರು ಕಾರುಗಳು ಜಖಂಗೊಂಡಿವೆ.

Advertisement

ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಕಾರು ಹೆದ್ದಾರಿಯಲ್ಲಿ ನಿಂತಿದ್ದ ನೀರಿನಿಂದಾಗಿ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಹೋಗುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.ಆ ಕಾರು ಮುಂದಕ್ಕೆ ಚಲಿಸಿ ಮತ್ತೊಂದು ಕಾರಿಗೆ ಢಿಕ್ಕಿಯಾಗಿದೆ.

ಎರಡು ಕಾರುಗಳು ಹೆದ್ದಾರಿ ಬದಿಯ ಪೊದೆಗೆ ನುಗ್ಗಿದ್ದು, ಮತ್ತೂಂದು ಕಾರು ರಸ್ತೆ ಬದಿಯಲ್ಲಿ ನಿಂತಿದೆ. ಒಂದು ಕಾರು ಡಿವೈಡರ್‌ಗುದ್ದಿ ಮುಂದಕ್ಕೆ ಚಲಿಸಿ ನಿಂತಿದೆ.

ಹೆದ್ದಾರಿಯಲ್ಲಿ ವಾಹನ ಸಂಚಾರ ಕಡಿಮೆಯಿದ್ದ ಪರಿಣಾಮ ಹೆಚ್ಚಿನ ಹಾನಿಯುಂಟಾಗಿಲ್ಲ.ಕಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೈಕ್‌ಗಳ ಢಿಕ್ಕಿ; ಗಾಯ
ಕಾಪು: ಕಟಪಾಡಿ ಮಟ್ಟು ದುಗ್ಗಪಾಡಿಯಲ್ಲಿ ಬೈಕ್‌ಗಳು ಮುಖಾಮುಖಿ ಢಿಕ್ಕಿ ಹೊಡೆದುಕೊಂಡಿದ್ದು, ಸವಾರರಾದ ಧರ್ಮೇಶ್‌, ವಿವೇಕ್‌ ಮತ್ತು ಕೌಶಲ್‌ ಅವರು ಗಾಯಗೊಂಡಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next