Advertisement

ಮೂಳೂರು-ಅಡ್ಡೂರು ಜೋಡುಕರೆ ಕಂಬಳ: ಪ್ರಥಮ ವರ್ಷದ “ಗುರುಪುರ ಕಂಬಳ ಸಂಭ್ರಮ’ಕ್ಕೆ ಚಾಲನೆ

01:13 AM Apr 13, 2024 | Team Udayavani |

ಮಂಗಳೂರು: ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್‌ ಆಶ್ರಯದಲ್ಲಿ ಪ್ರಥಮ ವರ್ಷದ ಹೊನಲು ಬೆಳಕಿನ ಮೂಳೂರು-ಅಡ್ಡೂರು ಜೋಡುಕರೆ ಕಂಬಳದ “ಗುರುಪುರ ಕಂಬಳ’ ಸಂಭ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು.

Advertisement

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಅವರು ದೀಪ ಬೆಳಗಿಸಿ ಮಾತನಾಡಿ, ಕರಾವಳಿಯ ಮಣ್ಣಿನ ಜಾನಪದ ಕ್ರೀಡೆಯಾಗಿ ಕಂಬಳ ಮಹತ್ವ ಪಡೆದುಕೊಂಡಿದೆ. ಮೊದಲ ಬಾರಿಗೆ ಮೂಳೂರು-ಅಡ್ಡೂರು ಜೋಡುಕರೆ ಕಂಬಳ ನಡೆಯುತ್ತಿರುವುದು ಸ್ತುತ್ಯಾರ್ಹ ಎಂದರು.

ಗುರುಪುರ ಪೊಂಪೈ ಚರ್ಚ್‌ನ ಧರ್ಮಗುರು ವಂ| ರುಡಾಲ್ಫ್ ರವಿ ಡೇಸಾ ಮಾತನಾಡಿ, ಸಮಸ್ತರು ಒಗ್ಗೂಡಿ ಕಂಬಳದ ಮೂಲಕ ಸೌಹಾರ್ದ ಬಿತ್ತುವ ಕೆಲಸ ಇಲ್ಲಿ ನಡೆದಿದೆ. ಕಂಬಳ ನಮ್ಮನ್ನು ಒಂದುಗೂಡಿಸುತ್ತದೆ ಎಂದರು.

ಗುರುಪುರ ದಾರುಸ್ಸಲಾಂ ಜುಮ್ಮಾ ಮಸ್ಜಿದ್‌ನ ಖತೀಬ್‌ ಜಮಾಲ್‌ ದಾರಿಮಿ ಮಾತನಾಡಿ, ಕಂಬಳ ಆಯೋಜನೆ ಮೂಲಕ ಸೌಹಾರ್ದದ ವೇದಿಕೆ ನಿರ್ಮಾಣಗೊಂಡಿದೆ. ಶಾಂತಿ- ಸಾಮರಸ್ಯ ಮೂಡಿಸುವ ಆಶಯಲ್ಲಿ ಕಂಬಳ ಆಯೋಜನೆ ಮಾಡಿದ್ದು ಅಭಿನಂದನೀಯ ಎಂದರು.

ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಕಂಬಳ ಭಕ್ತಿ ಪ್ರಧಾನವಾದುದು. ಎಂದರು.

Advertisement

ರವಿರಾಜ್‌ ಶೆಟ್ಟಿ ನಿಟ್ಟೆಗುತ್ತು ಅಧ್ಯಕ್ಷತೆ ವಹಿಸಿದ್ದರು. ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿ ಜಿ.ಟಿ. ವಾಸುದೇವ ಭಟ್‌, ಬೊಳಾರಗುತ್ತು ಶಶಿಧರ ಭಟ್‌, ಗುರುಪುರ ಗ್ರಾ.ಪಂ. ಅಧ್ಯಕ್ಷೆ ಸಫರಾ, ಉಪಾಧ್ಯಕ್ಷ ದಾವೂದ್‌, ಏತಮೊಗರುಗುತ್ತು ಗಡಿಕಾರ ಸದಾಶಿವ ಶೆಟ್ಟಿ ಯಾನೆ ಜಯ ಶೆಟ್ಟಿ, ದೊಡ್ಡಗುತ್ತು ಇರುವೈಲು ಗಡಿಕಾರ ಜಗದೀಶ ಶೆಟ್ಟಿ ಯಾನೆ ಇಂರ್ದಾಳ ಕೊರಗ ಶೆಟ್ಟಿ , ಟ್ರಸ್ಟ್‌ನ ಗೌರವಾಧ್ಯಕ್ಷ ಇನಾಯತ್‌ ಅಲಿ ಮುಲ್ಕಿ, ಪದ್ಮನಾಭ ಕೋಟ್ಯಾನ್‌ ಪೆಲತ್ತಡಿ, ಕಾರ್ಯಾಧ್ಯಕ್ಷ ಸುರೇಂದ್ರ ಕಂಬಳಿ ಅಡ್ಯಾರುಗುತ್ತು, ಅಧ್ಯಕ್ಷ ರಾಜ್‌ಕುಮಾರ್‌ ಶೆಟ್ಟಿ ತಿರುವೈಲುಗುತ್ತು, ಪ್ರ. ಕಾರ್ಯದರ್ಶಿ ಯಶವಂತ್‌ ಶೆಟ್ಟಿ ಬೆಳ್ಳೂರುಗುತ್ತು, ಕೋಶಾಧಿಕಾರಿ ಜಗದೀಶ ಆಳ್ವ, ಟ್ರಸ್ಟಿಗಳಾದ ವಿನಯ ಕುಮಾರ್‌ ಶೆಟ್ಟಿ ಮಾಣಿಬೆಟ್ಟುಗುತ್ತು, ಜಯಶೀಲ ಅಡ್ಯಂತಾಯ ಅಡ್ಯಾರುಗುತ್ತು, ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ಹರೀಶ್‌ ಭಂಡಾರಿ ಗುರುಪುರ ಬಂಗ್ಲೆ, ಬಾಲಕೃಷ್ಣ ಪೂಜಾರಿ ಬರಿಪಟ್ಲ, ಪ್ರಮುಖರಾದ ಜಗದೀಶ ಶೆಟ್ಟಿ, ಗಿರೀಶ್‌ ಆಳ್ವ, ಪುರುಷೋತ್ತಮ ಮಲ್ಲಿ, ಪ್ರೇಮನಾಥ ಮಾರ್ಲ, ಬಾಲಕೃಷ್ಣ ರಾವ್‌ ನೂಯಿ, ಪ್ರಮೋದ್‌ ಕುಮಾರ್‌ ರೈ, ಡಾ| ರವಿರಾಜ್‌ ಶೆಟ್ಟಿ, ಶೀನ ಕೋಟ್ಯಾನ್‌, ಸದಾಶಿವ ಉಪಾಧ್ಯಾಯ, ಜಿ. ಪಾಂಡುರಂಗ ಕಾಮತ್‌, ಚಂದ್ರಹಾಸ ಪೂಜಾರಿ, ತನಿಯಪ್ಪ ಪೂಜಾರಿ, ಜತ್ತಿ ಪೂಜಾರಿ, ದೊಂಬಯ ಪೂಜಾರಿ, ಸೀತಾರಾಮ ಪೂಜಾರಿ, ಶ್ರೀಧರ ಬೊಂಡಂತಿಲ, ಕೀರ್ತಿರಾಜ್‌, ವಾಲ್ಟರ್‌ ಡಿಸೋಜ, ಶ್ರೀಧರ್‌, ರೋಹಿತ್‌, ಸಜಿತ್‌ ಶೆಟ್ಟಿ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ರಾಜ್‌ಕುಮಾರ್‌ ಶೆಟ್ಟಿ ತಿರುವೈಲುಗುತ್ತು ಸ್ವಾಗತಿಸಿದರು. ನಿತೇಶ್‌ ಶೆಟ್ಟಿ ಎಕ್ಕಾರು ನಿರೂಪಿಸಿದರು.

106 ಜತೆ ಕೋಣಗಳು ಭಾಗಿ
ಇದೇ ಮೊದಲ ಬಾರಿಗೆ “ಗುರುಪುರ ಕಂಬಳ’ ಆಯೋಜನೆ ಮಾಡಲಾಗಿದೆ. ಕನೆಹೆಲಗೆ ವಿಭಾಗದಲ್ಲಿ 8 ಜತೆ, ಹಗ್ಗ ಹಿರಿಯ 7, ಹಗ್ಗ ಕಿರಿಯ 13, ಅಡ್ಡ ಹಲಗೆ 3, ನೇಗಿಲು ಹಿರಿಯ 18 ಮತ್ತು ನೇಗಿಲು ಕಿರಿಯದಲ್ಲಿ 57 ಜತೆ ಕೋಣ ಸೇರಿದಂತೆ ಒಟ್ಟು 106 ಜತೆ ಕೋಣಗಳು ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next