Advertisement

ಮುಲುಂಡ್‌ ಬಿಲ್ಲವರ ಅಸೋಸಿಯೇಶನ್‌: ಶ್ರೀ ಶನೀಶ್ವರ ಗ್ರಂಥ ಪಾರಾಯಣ

04:46 PM Sep 25, 2018 | |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮುಲುಂಡ್‌ ಸ್ಥಳೀಯ ಕಚೇರಿಯ ವತಿಯಿಂದ ಸೆ. 22 ರಂದು ಅಪರಾಹ್ನ  ಮುಲುಂಡ್‌ ಪೂರ್ವದ ನೀಲಂ ನಗರದಲ್ಲಿನ ಶ್ರೀ ವದ‌ìನ್‌ ಸಭಾಗೃಹದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ ಮತ್ತು ಸಾರ್ವಜನಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ಜಯಂತ್ಯೋತ್ಸವ ಪ್ರಯುಕ್ತ ಮಧ್ಯಾಹ್ನ ಬ್ರಹ್ಮಶ್ರೀ ನಾರಾಯಣ ಗುರುಪೂಜೆ ನಡೆಯಿತು. ಸಂಜೆ  ಶ್ರೀ ರಾಧಾಕೃಷ್ಣ  ಶ್ರೀ ಶನೀಶ್ವರ ಮಂದಿರ ಡೊಂಬಿವಲಿ ಇದರ ಸದಸ್ಯರಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣ ನೆರವೇರಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಮಹಾಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು. ವಿದ್ವಾನ್‌ ಪ್ರಕಾಶ್‌ ಭಟ್‌ ಕಾನಂಗಿ ಅವರ  ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಪೂಜಾಧಿಗಳು ನಡೆಯಿತು.  ಮುಲುಂಡ್‌ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಕೆ. ಸುರೇಶ್‌ಕುಮಾರ್‌ ಮತ್ತು ರತ್ನಾ ಸುರೇಶ್‌ಕುಮಾರ್‌ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಅಸೋಸಿಯೇಶನ್‌ನ ಉಪಾಧ್ಯಕ್ಷ ದಯಾನಂದ್‌ ಆರ್‌. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಬಿಲ್ಲವರ ಅಸೋಸಿಯೇಶನ್‌ ಮಾಜಿ ಮಹಿಳಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್‌, ಮುಲುಂಡ್‌ ಸ್ಥಳೀಯ ಕಚೇರಿಯ  ಗೌರವ ಕಾರ್ಯಾಧ್ಯಕ್ಷ ಕೆ. ಪಿ. ಸಂಜೀವ, ಉಪಾಧ್ಯಕ್ಷರುಗಳಾದ ರವಿ ಕೋಟ್ಯಾನ್‌ ಮತ್ತು ಶಂಕರ ಅಮೀನ್‌, ಗೌರವ  ಕಾರ್ಯದರ್ಶಿ ಸುಶೀಲ್‌ ಸಾಲ್ಯಾನ್‌, ಗೌರವ  ಕೋಶಾಧಿಕಾರಿ ಶಂಕರ ಜೆ. ಪೂಜಾರಿ, ರಾಜಾ ವಿ. ಸಾಲ್ಯಾನ್‌ ಹಾಗೂ  ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಮುಖ್ಯಸ್ಥರು, ಸದಸ್ಯರು, ಸಮಾಜ ಬಾಂಧವರು ಹೆಚ್ಚಿನ ಸದಸ್ಯರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next