Advertisement
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.13ರಂದು ಜಾನಪದ ಕಾರ್ಯಕ್ರಮದೊಂದಿಗೆ ಪ್ರಚಾರ ಆರಂಭ ವಾಗಲಿದ್ದು, 14ರಿಂದ ಆರು ದಿನಗಳ ಕಾಲ ಐದು ವೇದಿಕೆಗಳಲ್ಲಿ ಭಾರತದ ಇತರೆ ಭಾಷೆಗಳ 11 ನಾಟಕಗಳು, ಕನ್ನಡದ ಹತ್ತು ನಾಟಕಗಳಲ್ಲದೆ, 2 ಯಕ್ಷಗಾನ ಪ್ರಸಂಗಗಳು, ಒಂದು ಬಯಲಾಟ ಹಾಗೂ ಒಂದು ತೊಗಲುಗೊಂಬೆಯಾಟಗಳು ಪ್ರದರ್ಶನಗೊಳ್ಳಲಿವೆ ಎಂದರು.
Related Articles
Advertisement
ಬಹುರೂಪಿ ಜಾನಪದ ಉತ್ಸವ: ಫೆ.13ರಂದು ಬಹುರೂಪಿ ಜಾನಪದ ಉತ್ಸವ ಉದ್ಘಾಟನೆಯಾಗಲಿದ್ದು, ಇದರಲ್ಲಿ ರಾಜ್ಯದ ಕೊಡವ, ತುಳು, ಬ್ಯಾರಿ, ಅರೆ ಭಾಷೆ, ಜಾನಪದ ಮತ್ತು ಬಯಲಾಟ ಅಕಾಡೆಮಿಗಳು ಪ್ರಾಯೋಜಿಸುವ ಕಲಾ ಪ್ರಕಾರಗಳು ಈ ಬಾರಿಯ ಉತ್ಸವದ ವಿಶೇಷತೆಯಾಗಿದೆ ಎಂದು ಹೇಳಿದರು.
ಫೆ.15ರಿಂದ 19ರವರೆಗೆ ಮೈಸೂರಿನ ವಿವಿಧೆಡೆ ಮೈಸೂರಿನ ಗಾಂಧೀ ರಂಗಪಯಣ ಪ್ರಸ್ತುತಪಡಿಸುವ ಪಾಪು ಗಾಂಧಿ-ಗಾಂಧಿ ಬಾಪು ನಾಟಕ ಪ್ರದರ್ಶನಗೊಳ್ಳಲಿದೆ. ಫೆ.19ರಂದು ಕವಿಕಟ್ಟೆಯಲ್ಲಿ ಸಂಜೆ 4ಗಂಟೆಗೆ ಕವಿ ಕಂಡ ಗಾಂಧಿ ಎಂಬ ನಮ್ಮ ಹಿರಿಯ ಶ್ರೇಷ್ಠ ಕವಿಗಳು ಗಾಂಧಿ ಕುರಿತು ರಚಿಸಿದ ಕವನಗಳನ್ನು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದರು ವಾಚಿಸಲಿದ್ದಾರೆ.
ಪುಸ್ತಕ ಮಳಿಗೆಗಳು: ಬಹುರೂಪಿ ನಾಟಕೋತ್ಸವದ ಆಹಾರ ಮಳಿಗೆ ವಿಚಾರದಲ್ಲಿ ವಿಶೇಷ ಗಮನಹರಿಸಿದ್ದು, ಎಂದಿನಂತೆ ಆಹಾರ ಮಳಿಗೆಗಳ ಅರ್ಜಿ ಕರೆಯದೆ ಕನ್ನಡ ನಾಡಿನ ಹತ್ತು ದೇಸಿಯ ಆಹಾರ ಮಳಿಗೆಗಳನ್ನು ನಿರ್ಮಿಸಲಿದ್ದು, ಮಲೆನಾಡು, ಕರಾವಳಿ, ಉತ್ತರಕನ್ನಡ, ಕೊಡವ, ಕಲ್ಯಾಣ ಕರ್ನಾಟಕದ ವಿಶೇಷ ಆಹಾರಗಳು ಇರಲಿವೆ. ಕರಕುಶಲ ಮಳಿಗೆಗಳು, ಬೆಂಗಳೂರು ಗಾಂಧಿ ಭವನದ ಗಾಂಧಿಪ್ರತಿಮೆ ಮತ್ತು ಸರಕುಗಳು, ಪುರಾತನ ನಾಣ್ಯ,ನೋಟು ಸಂಗ್ರಹಗಳ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಮಳಿಗೆಗಳು ಇರಲಿವೆ.
ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟ: ಫೆ.4ರಿಂದಲೇ ನಾಟಕ ಪ್ರದರ್ಶನಗಳ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಿದ್ದು, ಟಿಕೆಟ್ ದರ 100 ರೂ. ನಿಗದಿಪಡಿಸಿದೆ. ರಂಗಾಯಣದ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯಬಹುದಾಗಿದೆ. ಜತೆಗೆ ಬಹುರೂಪಿ ನಾಟಕೋತ್ಸವದ ಸಂದರ್ಭದಲ್ಲಿ ನಾಟಕ ಪ್ರದರ್ಶನದ ಒಂದು ಗಂಟೆ ಮುಂಚಿತವಾಗಿ ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಕೋಟಿ ರೂ.ಗಳಿಗೆ ಪ್ರಸ್ತಾವನೆ: ಈ ಬಾರಿಯ ಬಹುರೂಪಿ ನಾಟಕೋತ್ಸವಕ್ಕೆ 95 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದ್ದು, ಸರ್ಕಾರದಿಂದ 1 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಮೈಸೂರು ರಂಗಾಯಣದ ಅಭಿವೃದ್ಧಿಗಾಗಿ 9 ಕೋಟಿ ಅನುದಾನ ಕೇಳಿದ್ದೇವೆ. ಕಳೆದ ವರ್ಷದ ರಂಗ ಚಟುವಟಿಕೆಯ ಬಾಕಿ 2 ಕೋಟಿ ರೂ.ಗಳನ್ನು ಸರ್ಕಾರ ಕೊಡಬೇಕಿದೆ ಎಂದು ವಿವರಿಸಿದರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಗಾಂಧಿ ಪಥ ದ ಭಿತ್ತಿಚಿತ್ರವನ್ನು ಹಿರಿಯ ರಂಗಕರ್ಮಿ ಎಚ್.ಕೆ.ರಾಮನಾಥ್ ಬಿಡುಗಡೆ ಮಾಡಿದರು. ಬಹುರೂಪಿ ಪ್ರಧಾನ ಸಂಚಾಲಕ ಹುಲುಗಪ್ಪ ಕಟ್ಟಿàಮನಿ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ , ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ, ಗೀತಾ ಮೋಂಟಡ್ಕ, ರಾಮನಾಥ್ ಉಪಸ್ಥಿತರಿದ್ದರು.
25 ನಾಟಕಗಳ ವಿವರಫೆ.13, ಸಂಜೆ 7.30
ಸ್ಥಳ: ಕಲಾಮಂದಿರ
ವೀರ ಅಭಿಮನ್ಯು ಪೌರಾಣಿಕ ಯಕ್ಷಗಾನ ಪ್ರಸಂಗ (ಕನ್ನಡ) ಫೆ.14, ಸಂಜೆ 7.30
ಸ್ಥಳ: ಭೂಮಿಗೀತ, ರಂಗಾಯಣ
ಸದಾನ್‌ಬಗಿ ಇಶೈ (ಮಣಿಪುರಿ)
ರಾತ್ರಿ 8
ಸ್ಥಳ: ವನರಂಗ, ರಂಗಾಯಣ
ವೀರರಾಣಿ ಕಿತ್ತೂರು ಚೆನ್ನಮ್ಮ (ದೊಡ್ಡಾಟ)
ಸಂಜೆ 7.30
ಸ್ಥಳ: ಕಿರು ರಂಗಮಂದಿರ
ಬೆಂದಕಾಳು ಆನ್ ಟೋಸ್ಟ್ (ಕನ್ನಡ) ಫೆ.15, ಸಂಜೆ 7.30
ಸ್ಥಳ: ಭೂಮಿಗೀತ
ಮಹದೇವ ಭಾಯಿ (ಇಂಗ್ಲೀಷ್/ಹಿಂದಿ)
ಸ್ಥಳ: ಕಿರು ರಂಗಮಂದಿರ
ಭಗವದಜ್ಜುಕೀಯಮ್ (ಹಿಂದಿ)
ಸ್ಥಳ: ಕಲಾಮಂದಿರ
ಮುಖ್ಯಮಂತ್ರಿ (ಕನ್ನಡ)
ರಾತ್ರಿ 8
ಸ್ಥಳ: ವನರಂಗ
ಝಲ್ಕರಿ (ಹಿಂದಿ) ಫೆ.16, ಸಂಜೆ 7.30
ಸ್ಥಳ:ಭೂಮಿಗೀತ
ಸಂಗೀತ್‌ಬಾರೀ (ಮರಾಠಿ)
ಐಂದಗಿ ಔರ್ ಜೋಂಕ್ (ಹಿಂದಿ)
ಈಡಿಪಸ್ (ಬೆಂಗಾಲಿ
ರಾತ್ರಿ 8
ಮಂಟೇಸ್ವಾಮಿ ಕಥಾಪ್ರಸಂಗ (ಕನ್ನಡ) ಫೆ.17, ಸಂಜೆ 6
ಸ್ಥಳ: ಕಿರು ರಂಗಮಂದಿರ
ದ ಬ್ಲಾಕ್ ಬೋರ್ಡ್ ಲ್ಯಾಂಡ್ (ಹಿಂದಿ/ಇಂಗ್ಲೀಷ್)
ಸಂಜೆ 6.30
ಸ್ಥಳ: ಭೂಮಿಗೀತ
ಗಾಂಧಿ ವರ್ಸಸ್ ಗಾಂಧಿ (ಕನ್ನಡ)
ಸಂಜೆ 7, ಸ್ಥಳ: ವನರಂಗ
ದೇವಯಾನಿ (ಕನ್ನಡ)
ಸಂಜೆ 7.30, ಸ್ಥಳ: ಕಲಾಮಂದಿರ
ಸುಭದ್ರ ಕಲ್ಯಾಣ (ಕನ್ನಡ) ಫೆ.18, ಸಂಜೆ 6
ಸ್ಥಳ: ಕಿರು ರಂಗಮಂದಿರ
ಮಿಸ್ ಜೂಲಿ (ಕನ್ನಡ)
ಸಂಜೆ 6.30, ಸ್ಥಳ: ಭೂಮಿಗೀತ
ಪರಿತ್ರಾಣ್ (ಗುಜರಾತಿ)
ಸಂಜೆ 7, ಸ್ಥಳ: ವನರಂಗ
ಕೆಂಡೋನಿಯನ್ಸ್ (ಕನ್ನಡ)
ಸಂಜೆ 7.30, ಕಲಾಮಂದಿರ
ಶಾಕುಂತಲಂ (ಮಲಯಾಳಂ) ಫೆ.19, ಸಂಜೆ 6
ಸ್ಥಳ: ಕಿರು ರಂಗಮಂದಿರ
ಸ್ವಭಾಬ್‌ಜತ (ಅಸ್ಸಾಮಿ)
ಸಂಜೆ 6.30, ಭೂಮಿಗೀತ
ಅಕ್ಷಯಾಂಬರ (ಕನ್ನಡ)
ಸಂಜೆ 7, ವನರಂಗ
ಕಾಮ್ಯಕಲಾ ಪ್ರತಿಮಾ (ಕನ್ನಡ)
ಸಂಜೆ 7.30, ಕಲಾಮಂದಿರ
ಮಹಾತ್ಮ (ಕನ್ನಡ)