Advertisement

‘ಬಹುಭಾಷಿಕತೆ ಜೀವ ವೈವಿಧ್ಯಗಳ ಸಂಕೇತ’

05:05 PM Mar 31, 2018 | |

ಮಂಗಳಗಂಗೋತ್ರಿ : ಬಹುಭಾಷಿಕತೆ ಕೇವಲ ಭಾಷೆಗೆ ಸಂಬಂಧಿಸಿದ್ದಲ್ಲ. ಅದು ಪರಿಸರ ಸಂಸ್ಕೃತಿ ಮತ್ತು ಜೀವ ವೈವಿಧ್ಯಗಳ ಸಂಕೇತ. ಜಿಲ್ಲೆಯಲ್ಲಿ ಮೂಡಿ ಬಂದ ಸಾಹಿತ್ಯ ಬಹುಭಾಷಾ ನೆಲೆಯಿಂದಲೇ ತನ್ನ ಸತ್ವವನ್ನು ಪಡೆದುಕೊಂಡಿರುವಂತದ್ದು ಎಂದು ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ| ಶಿವರಾಮ ಪಡಿಕಲ್‌ ಹೇಳಿದರು.

Advertisement

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಸ್ಯಾಪ್‌ ಯೋಜನೆಯ ಆಶ್ರಯದಲ್ಲಿ ‘ಕರಾವಳಿಯ ಬಹುಭಾಷಿಕ, ಸಾಹಿತ್ಯಕ ಸಾಂಸ್ಕೃತಿಕ ಅಧ್ಯಯನದ ವೈಧಾನಿಕತೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಹು ಸಾಂಸ್ಕೃಕ, ಆರೋಗ್ಯ, ಬಹುಭಾಷಾ ಒಡನಾಟ ಮತ್ತು ರಾಜಕೀಯಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ನಾವು ಸಾಂಸ್ಕೃತಿಕ ಭಾಷಾಂತರವನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಹೇಳಿದ ಅವರು ಕರ್ನಾಟಕದ ಆಧುನಿಕತೆಯ ಹಿನ್ನೆಲೆಯಲ್ಲಿ ಬಹು ಭಾಷಿಕತೆ, ಸಾಹಿತ್ಯ, ಸಂಸ್ಕೃತಿಗಳನ್ನು ಅನುಸಂಧಾನಿಸಬಹುದಾದ ರೀತಿಗಳ ಬಗ್ಗೆ ಚರ್ಚಿಸಿದರು. 

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಅವಿನಾಶ್‌ ಟಿ., ಸ್ಯಾಪ್‌ ಯೋಜನೆಯ ಸಂಯೋಜಕ ಪ್ರೊ| ಬಿ.ಶಿವರಾಮ ಶೆಟ್ಟಿ, ಪ್ರಾಧ್ಯಾಪಕ ಡಾ| ನಾಗಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು. ಡಾ| ಧನಂಜಯ ಕುಂಬ್ಳೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next