ಮುಂಬಯಿ: ನಮ್ಮ ಬದುಕು ನಮಗೆ ಮುಖ್ಯ. ಆ ಬದುಕು ನಮ್ಮ ಕವಿತೆಗಳಲ್ಲಿ ಪಡಿಮೂಡಬೇಕು. ಕವಿತೆ ಭಾಷೆಯಲ್ಲ ಅದು ಇಂದ್ರಿಯಾತೀತವಾದುದು. ಯಾವತ್ತೋ ಒಂದು ಕೆಟ್ಟ ಮನಸ್ಸು ಕವಿತೆ ರಚಿಸಲಾರದು. ಕವಿತೆ ಕಟ್ಟಲು ಒಳ್ಳೆಯ ಸುಸಂಸ್ಕೃತ ಮನಸ್ಸು ಬೇಕು. ಯಾರಿಗೆ ಅರಿವು ಇಲ್ಲವೋ ಅವರಿಗೆ ಅರಿವನ್ನು ಕೊಡುವ ಕೆಲಸ ಕವಿಗಳಿಂದ ಆಗಬೇಕು. ಏಕೆಂದರೆ ಕವಿತೆ ಬದುಕನ್ನು ಪ್ರೀತಿಸಲು ಕಲಿಸುತ್ತದೆ ಎಂದು ಹಿರಿಯ ಕವಯತ್ರಿ ಡಾ| ಸುನೀತಾ ಎಂ. ಶೆಟ್ಟಿ ತಿಳಿಸಿದರು
ಆ. 19ರಂದು ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್ಕೊàಪರ್ ವತಿಯಿಂದ ಸ್ವರ್ಣ ಮಹೋತ್ಸವ ನಿಮಿತ್ತ ಘಾಟ್‌ಕೋಪರ್ ಪಂತ್‌ನಗರದಲ್ಲಿನ ವೆಲ್ಫೆàರ್ ಸೊಸೈಟಿಯ ಬಾಬಾಸ್ ಮಹೇಶ್ ಎಸ್. ಶೆಟ್ಟಿ ಸಭಾಗೃಹದಲ್ಲಿ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಬಹುಭಾಷಾ ಕವಿಗೋಷ್ಠಿ ಬಹಳ ಅರ್ಥಪೂರ್ಣವಾಗಿ ನಡೆದಿದೆ. ಭಾಗವಹಿಸಿದ ಬಹುಭಾಷೆಯ ಎಲ್ಲಾ ಕವಿಗಳು ತಮ್ಮ ಒಳ್ಳೆಯ ಕವಿತೆಗಳನ್ನು ಸಾದರ ಪಡಿಸಿದ್ದಾರೆ. ಮನುಷ್ಯತ್ವ ಇಂದು ಅರಳಬೇಕು. ಬದುಕನ್ನು ಸುಂದರವಾಗಿ ಹೇಗೆ ರೂಪಿಸಬೇಕೆಂಬ ಆಶಯವುಳ್ಳ ಕವಿತೆಗಳೇ ಇಂದು ಪ್ರಸ್ತುತಗೊಂಡಿರುವುದು ಸ್ತುತ್ಯರ್ಹ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಎಚ್. ಕೆ. ಸುಧಾಕರ್ ಅವರು ಮಾತನಾಡಿ, ನೋಡುವಾಗ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್ಕೊàಪರ್ ಇದು ಚಿಕ್ಕ ಸಂಸ್ಥೆಯಾಗಿ ಕಂಡರೂ ಅರ್ಥಪೂರ್ಣವಾದ ಮಹತ್ತರವಾದ ಕನ್ನಡದ ಕೆಲಸವನ್ನು ನಿಭಾಯಿಸಿದೆ. ಇದಕ್ಕೆ ಸಂಸ್ಥೆಯ ಸ್ವರ್ಣ ಸಂಭ್ರಮವೇ ಇದಕ್ಕೆ ಸಾಕ್ಷಿ. ಸಂಸ್ಥೆಯ ಅನನ್ಯ ಸೇವೆಯಿಂದ ಮುಂಬಯಿನಲ್ಲೂ ಕನ್ನಡ ನಾಡು ಉದಯಿಸಲಿ ಎಂದು ನುಡಿದರು.
ವೆಲ್ಫೆàರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ°ಬಾಳಿಕೆ ಅವರು ಅತಿಥಿಗಳನ್ನು ಗೌರವಿಸಿದರು. ಡಾ| ಗಿರಿಜಾ ಶಾಸ್ತ್ರಿ, ಗೋಪಾಲ್ ತ್ರಾಸಿ, ಗಣೇಶ್ ಕುಮಾರ್, ಡಾ| ಕರುಣಾಕರ್ ಶೆಟ್ಟಿ ಪಣಿಯೂರು, ಸಾ. ದಯಾ, ಡಾ| ಜಿ. ಪಿ. ಕುಸುಮಾ, ಅಶೋಕ್ ವಳದೂರು, ಅಶೋಕ್ ಪಕ್ಕಳ, ಶಾರದಾ ಎ. ಅಂಚನ್, ರೋನ್ಸ್ ಬಂಟ್ವಾಳ್, ಶಾಂತಿ ಶಾಸ್ತ್ರಿ, ಅಕ್ಷತಾ ದೇಶಪಾಂಡೆ, ಅರುಷಾ ಎನ್. ಶೆಟ್ಟಿ ವಿವಿಧ ಭಾಷೆಗಳಲ್ಲಿ ಕವಿತೆಗಳನ್ನು ಪ್ರಸ್ತುತಪಡಿಸಿದರು. ನಾರಾಯಣ ಶೆಟ್ಟಿ ನಂದಳಿಕೆ ತಮ್ಮ ಕವಿತೆ ವಾಚಿಸಿ ಕವಿಗೋಷ್ಠಿಯನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಾಬು ಶಿವ ಪೂಜಾರಿ, ಮಂಗಳೂರು ವಿವಿ ಸಂಯೋಜಕ ಮತ್ತು ಉಪ ಕುಲಸಚಿವ ಪ್ರಭಾಕರ ನೀರುಮಾರ್ಗ, ಮೂಡಬಿದ್ರೆ ಆಳ್ವಾಸ್ ಕಾಲೇಜ್‌ನ ಪ್ರಾಧ್ಯಾಪಕ ಡಾ| ಯೋಗೀಶ್ ಕೈರೋಡಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಬಂಟರವಾಣಿ ಸಂಪಾದಕ ಅಶೋಕ್ ಪಕ್ಕಳ, ಜಿ. ಟಿ. ಆಚಾರ್ಯ, ಕರ್ನೂರು ಮೋಹನ್ ರೈ, ಸತೀಶ್ ಎನ್. ಬಂಗೇರ, ರಾಧಾಕೃಷ್ಣ ಶೆಟ್ಟಿ, ಶಂಕರ್ ಶೆಟ್ಟಿ, ದಿವಾಕರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವೆಲ್ಫೆàರ್ ಸೊಸೈಟಿಯ ಕನ್ನಡ ವೆಲ್ಫೆàರ್‌ನ ಉಪಾಧ್ಯಕ್ಷ ಜಯರಾಜ್ ಜೈನ್, ಕೋಶಾಧಿಕಾರಿ ಹರೀಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ರಮಾನಂದ ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಶಾಂತಾ ಎನ್. ಶೆಟ್ಟಿ ಮತ್ತಿತರ ಪದಾಧಿಕಾರಿಗಳ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಸುಧಾಕರ ಎಲ್ಲೂರು ವಂದಿಸಿದರು.