Advertisement
ಮೂರು ದಿನ ಜರಗಿದ ಈ ಸಮ್ಮೇಳನದಲ್ಲಿ ರವಿವಾರ ಅವರು ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಮಾತುಗಳನ್ನಾಡಿದರು. ಆಳ್ವಾಸ್ ನುಡಿಸಿರಿಯ ರೂವಾರಿ ಡಾ| ಎಂ.ಮೋಹನ್ ಆಳ್ವ ಅವರು ಹದಿಮೂರು ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನಿಸಿ ಸಮ್ಮಾನಿಸಿದರು.
ಪ್ರಜಾಪ್ರಭುತ್ವವೇ ಶ್ರೇಷ್ಠವಾದ ಧರ್ಮ ಎಂದು ಸಮ್ಮೇಳನದ ಸರ್ವಾಧ್ಯಕ್ಷರು ಹೇಳಿದರು. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ. ನಮ್ಮ ಪರಂಪರೆ ಮತ್ತು ಆಧುನಿಕ ವ್ಯವಸ್ಥೆಯ ಬಗ್ಗೆ ಜಿಜ್ಞಾಸೆ ನಡೆದಿದೆ. ವೈಯಕ್ತಿಕವಾಗಿ ನಾನು ಅನೇಕ ನೂತನ ಸಂಗತಿಗಳನ್ನು ಅರಿತುಕೊಂಡೆ. ಇಂತಹ ಅದ್ಭುತ ಸಮ್ಮೇಳನದ ರೂವಾರಿ ಡಾ| ಮೋಹನ್ ಆಳ್ವ ಮತ್ತು ಅವರ ತಂಡ ಅಭಿವಂದನೀಯರೆಂದರು.
Related Articles
ಶಾಸಕ ಅಭಯಚಂದ್ರ ಜೈನ್, ಶಾಸಕ ಕ್ಯಾ| ಗಣೇಶ್ ಕಾರ್ಣಿಕ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
Advertisement
ನುಡಿಸಿರಿ ಪ್ರಶಸ್ತಿ ಪುರಸ್ಕೃತರುಅ|ವಂ| ಬಿಷಪ್ ಹೆನ್ರಿ ಡಿ’ಸೋಜಾ, ನಾಡೋಜ ಡಾ| ಎನ್.ಸಂತೋಷ್ ಹೆಗ್ಡೆ, ಡಾ| ತೇಜಸ್ವಿ ಕಟ್ಟಿàಮನಿ, ಡಾ| ಸಿದ್ಧಲಿಂಗ ಪಟ್ಟಣ ಶೆಟ್ಟಿ, ಪ್ರೊ| ಕೆ.ಬಿ.ಸಿದ್ದಯ್ಯ, ಪ್ರೊ| ಜಿ.ಎಚ್.ಹನ್ನೆರಡು ಮಠ, ಪ್ರೊ| ಬಿ.ಸುರೇಂದ್ರ ರಾವ್, ಡಾ| ಎಂ.ಪ್ರಭಾಕರ ಜೋಶಿ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಪದ್ಮರಾಜ ದಂಡಾವತಿ, ರತ್ನಮಾಲಾ ಪ್ರಕಾಶ್, ಡಾ| ತೋನ್ಸೆ ವಿಜಯಕುಮಾರ್ ಶೆಟ್ಟಿ ಮತ್ತು ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ. ಸಮ್ಮಾನಿತರನ್ನು ಗುರುಪ್ರಸಾದ್ ಭಟ್, ಚಂದ್ರಶೇಖರ್ ಗೌಡ, ಯೋಗೀಶ್ ಕೈರೋಡಿ, ರವಿಶಂಕರ್, ಡಾ| ಡಿ.ವಿ.ಪ್ರಕಾಶ್, ಡಾ| ಪ್ರವೀಣ್‌ಚಂದ್ರ, ದಿವ್ಯಶ್ರೀ ಡೆಂಬಳ, ರಜನೀಶ್, ಡಾ| ಪದ್ಮನಾಭ ಶೆಣೈ, ವಿಜಯಕುಮಾರ್, ಸುಧಾರಾಣಿ, ಡಾ| ಕೃಷ್ಣರಾಜ್ ಕರಬ, ಶಿವಪ್ರಸಾದ್ ಪರಿಚಯಿಸಿದರು. ಪ್ರಶಸ್ತಿಯು ಶಾಲು, ಹಾರ, ಫಲವಸ್ತು, ಸ್ಮರಣಿಕೆ, ಸಮ್ಮಾನ ಪತ್ರ ಮತ್ತು 25 ಸಾವಿರ ರೂ.ನಗದನ್ನು ಒಳಗೊಂಡಿದೆ. ಸಮ್ಮೇಳನದ ಸರ್ವಾಧ್ಯಕ್ಷ ಡಾ| ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಡಾ| ಆಳ್ವರು ಶಾಲು, ಸ್ಮರಣಿಕೆ, ಸಮ್ಮಾನಪತ್ರ, ಬೆಳ್ಳಿ ದೀಪ 50 ಸಾವಿರ ರೂ. ಸಹಿತ ಸಮ್ಮಾನಿಸಿದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಅಂಡಾರು ಗುಣಪಾಲ ಹೆಗ್ಡೆ ವಂದಿಸಿದರು. ಆಡಿ ತೋರಿಸುವುದಲ್ಲ ಮಾಡಿ ತೋರಿಸುವುದು
ಈ ಸಮ್ಮೇಳನ ಯಾವುದೇ ನಿರ್ಣಯ ಅಥವಾ ಠರಾವನ್ನು ಮಂಡಿಸದಿರುವುದೇ ವಿಶೇಷ ಎಂದರು ನಾಗತಿಹಳ್ಳಿ. ಎಷ್ಟೋ ಸಮ್ಮೇಳನಗಳು ಅದೆಷ್ಟೋ ನಿರ್ಣಯಗಳನ್ನು ಮಂಡಿಸಿ, ಸ್ವೀಕರಿಸಿವೆ. ಆದರೆ ಸಮ್ಮೇಳನದ ಚಪ್ಪರ ಬಿಚ್ಚುವ ಮೊದಲೇ ಈ ನಿರ್ಣಯಗಳು ಧೂಳೀಪಟವಾಗಿವೆ. ಕನ್ನಡ ಮಾಧ್ಯಮ ಶಿಕ್ಷಣ ಕಡ್ಡಾಯ, ಆಡಳಿತದಲ್ಲಿ ಕನ್ನಡ ತಂತ್ರಾಂಶ ಬಳಕೆ ಇತ್ಯಾದಿ ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ನುಡಿಸಿರಿ ವಿಶೇಷವಾದ ಪರಂಪರೆ ಹೊಂದಿದೆ. ಇಲ್ಲಿ ಆಡಿದ್ದನ್ನು ಮಾಡಲಾಗುತ್ತದೆ ಎಂದು ಶ್ಲಾಘಿಸಿದರು. ಪನ್ನೀರು, ಪುಷ್ಪ ಆರತಿ
ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪುರಸ್ಕೃತರನ್ನು ಪನ್ನೀರು ಸಿಂಪಡಿಸಿ, ಪುಷ್ಪವೃಷ್ಟಿಗೈದು, ಆರತಿ ಎತ್ತುವ ಮೂಲಕ ಗೌರವಿಸಲಾಯಿತು. ಎಲ್ಲಾ ಸಾಧಕರಿಂದ ಡಾ| ಆಳ್ವ ಅವರು ಆಶೀರ್ವಾದ ಪಡೆದರು. ಆಳ್ವರು ದೇಶದ ಆಸ್ತಿ
ಡಾ| ಆಳ್ವರು ದೇಶದ ದೊಡ್ಡ ಆಸ್ತಿ. ಇಂತಹ ಸಾಧಕರ ಬಗ್ಗೆ ಪಠ್ಯಪುಸ್ತಕ ರಚನೆಯಾಗಬೇಕು –ಕಟ್ಟಿಮನಿ
ಪ್ರೀತಿ, ವಿಶ್ವಾಸ, ನಿಷ್ಕಲ್ಮಶ ಭಾವದಿಂದ ಈ ಗೌರವ ಸ್ವೀಕರಿಸಿದ್ದೇನೆ-ಸಿದ್ದಯ್ಯ
ಕನ್ನಡದ ಔದಾರ್ಯದ ಮನಸ್ಸು ಮಾತ್ರ ಇಂತಹ ಅಪೂರ್ವ ಸಮ್ಮಾನ ನೀಡಲು ಸಾಧ್ಯ-ದಂಡಾವತಿ.
ನನಗೆ ದೊರೆತಿರುವ ಎಲ್ಲಾ ಪ್ರಶಸ್ತಿಗಳಿಗಿಂತ ಇದು ಶ್ರೇಷ್ಠ ಪ್ರಶಸ್ತಿ-ರತ್ನಮಾಲ
ಯಕ್ಷಗಾನ ಸಮುದಾಯದ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿದ್ದೇನೆ-ಜೋಶಿ ಮನೋಹರ ಪ್ರಸಾದ್