Advertisement
ಪರಿಶಿಷ್ಟ ಜಾತಿಗೆ ಸೇರಿದ ಗುಡ್ಡಮೊಗೇರ ಸಮುದಾಯ ಮುಂಡಕನ ಓಲಿಯಿಂದ ವಸ್ತುಗಳನ್ನು ಕುಲಕಸು ಬಾಗಿ ತಯಾರಿಸಿಕೊಂಡು ಬಂದಿದೆ. ಈ ಸಮುದಾಯ ಕಟಪಾಡಿ ಮಟ್ಟು, ಕಾಪು, ಮೂಳೂರು, ಪಡುಬಿದ್ರಿ, ಕನ್ನಂಗಾರು, ಅವರಾಲು, ಹೆಜಮಾಡಿ ಕೋಡಿಯಲ್ಲಿದ್ದರೂ ವೃತ್ತಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಕಟಪಾಡಿ ಮಟ್ಟುವಿನವರು ಮಾತ್ರ.
ಮುಂಡಕನ ಎಲೆ ಸಂಗ್ರಹಿಸು ವುದು, ಕೆರೆ, ನದಿದಂಡೆಗಳಿಂದ ತರ ಬೇಕಾದ ಕಾರಣ ತಲೆ ಹೊರೆಯಲ್ಲಿಯೇ ತರುವುದು, ಶ್ರಮ ಉತ್ಪನ್ನ
ಗಳಿಗೆ ಸೂಕ್ತವಾದ ಬೆಲೆ ಸಿಗದಿರುವುದು ವೃತ್ತಿ ನಶಿಸಲು ಒಂದು ಕಾರಣ.ಕಲಾವಿದರಿಗೆ ಸೂಕ್ತ ವಿನ್ಯಾಸ ರೂಪಿಸಿ ಗುಣಮಟ್ಟ ಹೆಚ್ಚಿಸುವಂತೆ ಮಾಡಿ ಮಾರುಕಟ್ಟೆ ಲಭ್ಯವಾಗುವಂತೆ ಮಾಡುವುದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸದಾಶಯವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಚಾಪೆ ಹೆಣೆಯುವ ಕಾರ್ಯಾಗಾರ ನಡೆಯಿತು. ಸಮುದಾಯದ ಸುಮಾರು ನೂರು ಮಂದಿ ವೃತ್ತಿಪರರು ಪಾಲ್ಗೊಂಡಿದ್ದರು.ಕಾರ್ಯಾಗಾರವನ್ನು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಾಜ ಕಲ್ಯಾಣ ಇಲಾಖೆ ಯಿಂದ ಈ ವೃತ್ತಿಪರರಿಗೆ ಸಬ್ಸಿಡಿ ಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.
Related Articles
Advertisement
ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ನಬಾರ್ಡ್ ಮಂಗಳೂರಿನ ಮಹಾಪ್ರಬಂಧಕ ಅರುಣ ತಲ್ಲೂರು, ಸಲಹೆಗಾರ ಪುರುಷೋತ್ತಮ ಅಡ್ವೆ, ಸಮುದಾಯದ ಸಂಘಟಕ ಜಗನ್ನಾಥ ಬಂಗೇರ ಮಟ್ಟು, ನಾಗರಾಜ ಗುರಿಕಾರ ಅಭ್ಯಾಗತರಾಗಿದ್ದರು. ಸಂಘಟಕ ರಾಜಶೇಖರ ಜಿ.ಎಸ್. ಮಟ್ಟು ಪ್ರಸ್ತಾವನೆಗೈದರು.
ಆರೋಗ್ಯಲಾಭಮುಂಡಕನ ಎಲೆಗಳಿಂದ ಅನೇಕ ಬಗೆಯ ಉತ್ಪನ್ನಗಳನ್ನು ತಯಾರಿಸಬಹುದು. ಇದರ ಮೂಲದ್ರವ್ಯವನ್ನು ಪುಕ್ಕಟೆಯಾಗಿ ನಿಸರ್ಗ ಕೊಡುತ್ತದೆ. ಇದನ್ನು ಮಾಡುವ ವೃತ್ತಿಪರರಿಗೆ ಜೀವನಾಧಾರ, ಪಡೆಯುವ ಜನರಿಗೆ ಪರಿಸರಸ್ನೇಹಿ, ಆರೋಗ್ಯದಾಯಿ ಲಾಭ -ಹೀಗೆ ಕೊಡುಕೊಳ್ಳುವಿಕೆ ಲಾಗಾಯ್ತಿನಿಂದ ಬಂದಿದೆಯಾದರೂ ಆಧುನಿಕ ಜೀವನಕ್ರಮದಲ್ಲಿ ಈ ಕಲೆ ನಶಿಸುತ್ತ ಬಂದಿದೆ. ಮುಂಡಕನ ಓಲಿಯ ಚಾಪೆಯಲ್ಲಿ ಮಲಗುವುದರಿಂದ ಬೆನ್ನುನೋವು ಮೊದಲಾದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ರಾಜಶೇಖರ ಜಿ.ಎಸ್. ಮಟ್ಟು .