Advertisement
ಏನಿದು ಹರಳೆಣ್ಣೆ ?ಹರಳೆ ಬೀಜಗಳನ್ನು ಸಂಸ್ಕರಿಸಿ ಎಣ್ಣೆಯನ್ನು ತಯಾರಿಸಲಾಗುತ್ತದೆ. ಆರೋಗ್ಯದ ದೃಷ್ಟಿ ಯಿಂದ ನೈಸರ್ಗಿಕವಾಗಿ ದೊರೆಯುವ ಗಿಡ ಮೂಲಿಕೆಯಿಂದ ತಯಾರಿಸುವುದು ಸೂಕ್ತ.
ಇದರಲ್ಲಿರುವ ಸತ್ವಗಳು ಸೈಲೆನಿಕ್ ಆಮ್ಲ ತ್ವಚೆಯ ತೊಂದರೆಯನ್ನು ಸರಿ ಪಡಿಸಿ ಕಲೆಯಿಲ್ಲದ ತ್ವಚೆಯನ್ನು ನಿಮ್ಮದಾಗಿಸುತ್ತದೆ. ಬ್ಯಾಕ್ಟೀರಿಯಾ, ಶಿಲೀಂಧ್ರ ನಿವಾರಕ ಗುಣ ತ್ವಚೆಯ ಸುಕ್ಕನ್ನು ಕಡಿಮೆ ಮಾಡುತ್ತದೆ. ಮೂಳೆ ಸಮಸ್ಯೆ ನಿವಾರಿಸಲು ಓಲಿಕ್, ಲಿನೋಲಿಕ್, ರಿಸಿನೋಲಿಕ್ ಆಮ್ಲ ಮೂಳೆ ಸಮಸ್ಯೆ, ಸಂಧಿವಾತ ಸಮಸ್ಯೆಗಳ ನಿವಾರಣೆಗೆ ಸಹಕಾರಿ. ಈ ಎಣ್ಣೆಯನ್ನು ಬಿಸಿ ಮಾಡಿ ನೋವು ಉಂಟಾದ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ. ಸೊಂಪಾದ ಕೇಶಕ್ಕೂ ಬೇಕು
ಹಿರಿಯರು ಕೇಶ ಕಾಂತಿಗೆ ಏನು ಬಳಕೆ ಮಾಡುತ್ತಿದ್ದರು ಎಂದು ಕೇಳಿದರೆ ಬರುವ ಉತ್ತರ ಹರಳೆಣ್ಣೆಯೆಂದು. ತಲೆ ಕೂದಲ ಬೇರಿಗೆ ತಾಕುವ ವರೆಗೂ ಎಣ್ಣೆ ಮಸಾಜ್ ಮಾಡಿ ಅರ್ಧ ಗಂಟೆ ಬಳಿಕ ತಲೆಕೂದಲನ್ನು ತೊಳೆಯಬೇಕು. ಇದರಲ್ಲಿ ಅಂಟಿನ
ಗುಣ ವಿರುವುದರಿಂದ ತೊಳೆಯುವುದು ಕಷ್ಟವಾದರೂ ಕೂದಲ ಆರೈಕೆಗೆ ಇದೊಂದು ಉತ್ತಮ ವಿಧಾನವೆನ್ನಬಹುದು. ಇದರಿಂದ ಕೂದಲು ಉದು ರುವಿಕೆ ಸಮಸ್ಯೆ ನಿವಾರಣೆಯಾಗುವುದಲ್ಲದೆ ಸಿಲ್ಕಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.
Related Articles
ಇದರ ಸೇವನೆಯಿಂದ ಹೊಟ್ಟೆಯಲ್ಲಿರುವ ಕಲ್ಮಶ ನಿವಾರಣೆಯಾಗಿ ಉತ್ತಮ ಜೀರ್ಣಕ್ರಿಯೆ ಪ್ರಾಪ್ತಿಯಾಗುತ್ತದೆ. ಮಲಬದ್ಧತೆ ಸಮಸ್ಯೆಗೂ ಇದು ಪರಿಣಾಮಕಾ ರಿಯಾಗಿದ್ದು, ಹರಳೆಣ್ಣೆಯ ನೈಸರ್ಗಿಕ ದಿಂದ ಸಮಸ್ಯೆ ನಿವಾರಣೆಯಾಗುತ್ತದೆ.
ರಾಧಿಕಾ, ಕುಂದಾಪುರ
Advertisement