Advertisement

ಗೋವಾ ವಿನ್ಯಾಸಗಾರ ನಿಂದ “ಮಲ್ಟಿ ಮಾಸ್ಕ್’

12:47 AM Aug 25, 2020 | mahesh |

ಪಣಜಿ: ದಕ್ಷಿಣ ಗೋವಾದ ಕೈಗಾರಿಕಾ ಪರಿಕರಗಳ ವಿನ್ಯಾಸಗಾರ ದೀಪಕ್‌ ಪಠಾಣಿಯಾ, ಹೊಸ ವಿನ್ಯಾಸದ ಫೇಸ್‌ಕವರ್‌ ತಯಾರಿಸಿದ್ದಾರೆ. ಇದು ಸರ್ವ ರೀತಿಯ ಸುರಕ್ಷತೆ ನೀಡುವ ಮಾಸ್ಕ್ಗಳ ಹುಡುಕಾಟಕ್ಕೆ ತೆರೆ ಎಳೆಯಲಿದ್ದು, ಇದರಲ್ಲಿರುವ “ಮಲ್ಟಿ ಮಾಸ್ಕ್’ ಸೌಲಭ್ಯದಿಂದಾಗಿ ಕೊರೊನಾದಿಂದ ಸಂಪೂರ್ಣ ಸುರಕ್ಷೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ. ಹೆಲ್ಮೆಟ್‌ನಲ್ಲಿರುವಂತೆ ಇದರಲ್ಲಿ ಗಾಜಿನ ಮುಖಪರದೆ ಇರಲಿದೆ. ಅದನ್ನು ಮೇಲಕ್ಕೆ ಕೆಳಕ್ಕೆ ಸರಿಸಬಹುದು. ಫೇಸ್‌ಶೀಲ್ಡ್‌ಗೆ ಜೊತೆಯಾಗಿ, ಪ್ಲಾಸ್ಟಿಕ್‌ ಉಪಕರಣವೊಂದರಲ್ಲಿ ಮಾಸ್ಕ್ ಇರಿಸಲಾಗಿರುತ್ತದೆ. ಮಾಸ್ಕ್ಗೆ ಗಾಜಿನ ಪರದೆ ಅಡ್ಡ ಬರುವುದಿಲ್ಲ. ಅದರಿಂದ, ಉಸಿರಾಟ, ಮಾತುಕತೆ ಎಲ್ಲವನ್ನು ಸರಾಗವಾಗಿ ನಿರ್ವಹಿಸಬಹುದು. “”ಮಾಸ್ಕ್ನ ಬಟ್ಟೆಗಳನ್ನು ತೊಳೆದು ಬಳಸಬಹುದಾಗಿದೆ. ಅದರಿಂದ ಬಯೋ ತ್ಯಾಜ್ಯವನ್ನು ಗಣನೀಯವಾಗಿ ತಗ್ಗಿಸಬಹುದು” ಎಂದು ದೀಪಕ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next